Latest

ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಹೇಳಿದ್ದೇನು? ಯಾರ್ಯಾರಿಗೆಲ್ಲ ‘ಚುರುಕ್’ ಅನುಭವ ನೀಡಿದೆ ಬಜೆಟ್?

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಆದಾಯ ತೆರಿಗೆ ಮಿತಿ ಏರಿಕೆಯಿಂದಾಗಿ ಮಧ್ಯಮ ವರ್ಗದವರಿಗೆ ಅತ್ಯಂತ ಅನುಕೂಲ ಕಲ್ಪಿಸಿದಂತಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಮಧ್ಯಮ ವರ್ಗದವರ ಬೇಡಿಕೆಗಳಲ್ಲಿ ಅತ್ಯಂತ ಮುಖ್ಯವೆನಿಸಿದ್ದ 5 ಬೇಡಿಕೆಗಳನ್ನು ವಿಶೇಷವಾಗಿ ಗಮನದಲ್ಲಿರಿಸಿಕೊಂಡು ಈ ಬಾರಿಯ ಬಜೆಟ್ ಮಂಡಿಸಲಾಗಿದೆ.
ಉದ್ಯೋಗ ಸೃಷ್ಟಿ ಮಧ್ಯಮ ವರ್ಗದವರ ಮುಖ್ಯ ಬೇಡಿಕೆಯಾಗಿದೆ. ಕೋವಿಡ್ ಸಾಂಕ್ರಾಮಿಕ ಮಧ್ಯಮ ವರ್ಗದ ಹಲವರು ಕೆಲಸ ಕಳೆದುಕೊಳ್ಳುವಂತೆ ಮಾಡಿದೆ. ಈ ಬಜೆಟ್ ಮೂಲಕ ಸರಕಾರ ಉತ್ಪಾದನೆ, ತಂತ್ರಜ್ಞಾನ ಮತ್ತು ಸಂರಚನಾ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಕಲಂ 80 ಡಿ ಪ್ರಕಾರ ಆರೋಗ್ಯ ವಿಮೆ ಜಮಾ ಹೆಚ್ಚಳಕ್ಕೆ ಮಧ್ಯಮ ವರ್ಗದವರು ಹಲವು ದಿನಗಳಿಂದ ಒತ್ತಾಯಿಸುತ್ತ ಬಂದಿದ್ದರು. ಈಗ ಆರೋಗ್ಯ ವಿಮೆಯಿಂದಾಗುವ ಬಿಲ್ ಕಡಿತವನ್ನು 25 ಸಾವಿರದಿಂದ 50 ಸಾವಿರಕ್ಕೆ ಏರಿಸಲಾಗಿದೆ ಎಂದು ಅವರು ತಿಳಿಸಿದರು.

ಜೀವ ವಿಮೆ ಮತ್ತು ಆರೋಗ್ಯ ವಿಮೆಗಳಿಗೆ ಜಿಎಸ್’ಟಿ- ಸರಕು ಸೇವಾ ತೆರಿಗೆ ವಿಧಿಸಬಾರದು ಎನ್ನವ ಬೇಡಿಕೆಯನ್ನೂ ಮುಂದುರಿಸಲಾಗಿತ್ತು. ಈ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಿ ಬಜೆಟ್ ರೂಪಿಸಿರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದರು.

Home add -Advt

ಯಾವ್ಯಾವುದೆಲ್ಲ ತುಟ್ಟಿ?:
ಇಂದಿನ ಬಜೆಟ್ ಪ್ರಮುಖವಾಗಿ ಆಭರಣಪ್ರಿಯ ಮಹಿಳೆಯರು ಹಾಗೂ ಧೂಮಪಾನ ವ್ಯಸನಿಗಳಿಗೆ ‘ಚುರುಕ್ ‘ ಎನಿಸುವ ಅನುಭವ ನೀಡಿದೆ.

ಬಂಗಾರ, ಬೆಳ್ಳಿ, ವಜ್ರ, ಪ್ಲಾಟಿನಂ ದರ ಏರಿಕೆಯಾಗುವ ಮೂಲಕ ಆಭರಣಪ್ರಿಯ  ಮಹಿಳೆಯರಿಗೆ ನಿರಾಸೆಯಾಗಿದೆ.

ಬಟ್ಟೆ ಮೇಲಿನ ತೆರಿಗೆ ಏರಿಕೆ ಕೂಡ ಹಲವರಿಗೆ ಶಾಕ್ ನೀಡಿದ್ದು ಸಿಗರೇಟ್ ಮೇಲಿನ ತೆರಿಗೆ ಏರಿಸುವ ಮೂಲಕ ಧೂಮಪಾನ ಮಾಡುವವರಿಗೂ ‘ಚುರುಕ್’ ಎನಿಸುವಂತೆ ಮಾಡಿದೆ.

ಇದೇ ವೇಳೆ ಮೊಬೈಲ್ ಫೋನ್, ಕ್ಯಾಮರಾ ಲೆನ್ಸ್ ಆಮದು ಸುಂಕ ರದ್ದುಗೊಳಿಸಲಾಗಿದೆ.  ಟಿವಿ ಬೆಲೆ ಇಳಿಕೆಯಾಗಿದ್ದು ಅಲ್ಲದೇ ಬ್ಯಾಟರಿ ಮೇಲಿನ ಕಸ್ಟಮ್ಸ್ ಡ್ಯೂಟಿ ಶೇ.13ಕ್ಕೆ ಇಳಿಸಲಾಗಿದೆ.

2070ರ ವೇಳೆಗೆ ಭಾರತವನ್ನು ಸಂಪೂರ್ಣ ಹೊಗೆ ಮುಕ್ತವಾಗಿಸುವ ಗುರಿ ಹೊಂದಲಾಗಿದೆ ಎಂದು ನಿರ್ಮಲಾ ಸೀತರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

*ಬ್ಯಾಡಗಿ ತಾಲ್ಲೂಕಿನಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಎಲ್ಲಾ ಮೂಲಸೌಕರ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

https://pragati.taskdun.com/cm-basavaraj-bommaietha-irrigation-projectanurubudapanahalliasundi/

ಮದುವೆಮನೆಯಲ್ಲಿ ಅವಘಡ; 14 ಜನರ ಸಾವು

https://pragati.taskdun.com/mishap-in-the-marriage-house-14-people-died/

*ಬಡವರಿಗೆ, ಹಣದುಬ್ಬರ ನಿಯಂತ್ರಣಕ್ಕೆ ಯಾವುದೇ ಕ್ರಮಗಳೂ ಇಲ್ಲ; ಕೇಂದ್ರ ಬಜೆಟ್ ಬಗ್ಗೆ ಖರ್ಗೆ ವಾಗ್ದಾಳಿ*

https://pragati.taskdun.com/union-budget-2023mallikarjuna-khargereaction/

Related Articles

Back to top button