Karnataka News

ಸೂಟ್ ಕೇಸ್ ನಲ್ಲಿ ಬಾಲಕಿಯ ಶವ ಪತ್ತೆ ಕೇಸ್: 7 ಆರೋಪಿಗಳು ಬಿಹಾರದಲ್ಲಿ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ: ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಸೂಟ್ ಕೇಸ್ ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ 7 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Home add -Advt

ಬಾಲಕಿಯನ್ನು ಹತ್ಯೆಗೈದು ಸೂಟ್ ಕೇಸ್ ನಲ್ಲಿ ತುಂಬಿ ಆನೇಕಲ್ ತಾಲೂಕಿನ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಸೂಟ್ ಕೇಸ್ ಎಸೆದು ಹೋಗಿದ್ದರು. ಪ್ರಕರಣ ಸಂಬಂಧ ಇದೀಗ ಸೂರ್ಯನಗರ ಠಾಣೆ ಪೊಲೀಸರು ಬಿಹಾರದಲ್ಲಿ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಬಿಹಾರದ ನವಾಡ ಜಿಲ್ಲೆಯವರು. ಎಲ್ಲಾ ಆರೋಪಿಗಳನ್ನು ಆನೇಕಲ್ ನ ಸೂರ್ಯನಗರ ಠಾಣೆಗೆ ಕರೆತರಲಾಗುತ್ತಿದೆ. ಬಂಧಿತರಲ್ಲಿ ಮೂವರ ಗುರುತು ಪತ್ತೆಯಾಗಿದೆ. ಆಶಿಶ್ ಕುಮಾರ್, ಮುಖೇಶ್ ಹಾಗೂ ರಾಜಾರಾಮ್. ಆಶಿಶ್ ಕುಮಾರ್ ಗೆ ವಿವಾಹವಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದಾರೆ. ಬಾಲಕಿ ಹತ್ಯೆಗೆ ಇನ್ನಷ್ಟೇ ಕಾರಣ ತಿಳಿಯಬೇಕಿದೆ.

Related Articles

Back to top button