Kannada NewsKarnataka NewsLatest

ಖಾನಾಪುರ ಗಣೇಶ ಮಂಡಲಗಳಿಗೆ ಬಿಜೆಪಿ ನಾಯಕಿ ಸೋನಾಲಿ ಸರ್ನೋಬತ್ ಭೇಟಿ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್ ಖಾನಾಪುರದ ಗಣೇಶೋತ್ಸವ ಮಂಡಲಗಳಿಗೆ ಭೇಟಿ ನೀಡಿದರು.

ಈ ವೇಳೆ ಅವರು ಮಂಡಲ ಪದಾಧಿಕಾರಿಗಳೊಂದಿಗೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸಿದರು. ವಿವಿಧ ಪೆಂಡಾಲ್‌ಗಳ ಆರತಿ ಮತ್ತು ಪೂಜೆಯಲ್ಲೂ ಭಾಗವಹಿಸಿದ್ದರು.

Home add -Advt

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌ನಿಂದಾಗಿ ಎರಡು ವರ್ಷಗಳಿಂದ ಗಣೇಶೋತ್ಸವವನ್ನು ಸರಿಯಾಗಿ ಆಚರಿಸಲು ಸಾಧ್ಯವಾಗಲಿಲ್ಲ, ಆದರೆ ಈ ವರ್ಷ ಗಣಪತಿ ದೇವರು ಎಲ್ಲರಿಗೆ ಶಾಂತಿ, ಸಂತೋಷ ತಂದಿದ್ದಾನೆ. ಇದರೊಂದಿಗೆ ಸರ್ವರಿಗೂ ಆರೋಗ್ಯ ಭಾಗ್ಯವನ್ನೂನೀಡಲಿ ಎಂದರು.

ಖಾನಾಪುರ ಗಣೇಶೋತ್ಸವ ಸಂಭ್ರಮಕ್ಕೆ ಹೆಸರುವಾಸಿಯಾಗಿದೆ. ಜೀವನೋಪಾಯಕ್ಕಾಗಿ ಬೇರೆಡೆ ದುಡಿಯುವ ಅನೇಕ ಜನರು ತಮ್ಮ ತಮ್ಮ ಗ್ರಾಮಗಳಿಗೆ ಬರುತ್ತಾರೆ ಮತ್ತು ನಾಟಕಗಳು, ಡಿಎಸ್‌ಎಸ್‌ಎಸ್ ಸ್ಪರ್ಧೆಗಳು, ಪೂಜೆಗಳು ಮತ್ತು ಮಹಾಪ್ರಸಾದಗಳಂತೆ ವಿವಿಧ ಚಟುವಟಿಕೆಗಳನ್ನು ನಡೆಸುತ್ತಾರೆ. ಗಣಪತಿ  ಆಶೀರ್ವಾದದಿಂದ ಖಾನಾಪುರ ಸರ್ವತೋಮುಖ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಅವರು ಗಣೇಶೋತ್ಸವ ಮಂಡಲಗಳ ಎಲ್ಲ ಅಧ್ಯಕ್ಷರನ್ನು ಸನ್ಮಾನಿಸಿ ಅವರಿಗೆ ಪುಸ್ತಕಗಳು ಮತ್ತು ವೀರ್ ಸಾವರ್ಕರ್ ಫೋಟೋಗಳನ್ನು ನೀಡಿದರು.

ಲೈಂಗಿಕ ಕಿರುಕುಳ ಆರೋಪ: ನರ್ಸಿಂಗ್ ಕಾಲೇಜು ಆಡಳಿತಾಧಿಕಾರಿ ವಿರುದ್ಧ FIR ದಾಖಲು

Related Articles

Back to top button