
ಪ್ರಗತಿವಾಹಿನಿ ಸುದ್ದಿ: ವರದಕ್ಷಿಣೆಗಾಗಿ 6 ವರ್ಷದ ಮಗುವಿನ ಎದುರು ಮಹಿಳೆಯನ್ನು ಗಂಡನ ಮನೆಯವರು ಸುಟ್ಟು ಹಾಕಿದ್ದು, ತಾಯಿ ಸಾವಿಗೆ ತಂದೆ ಹಾಗೂ ತನ್ನ ಅಜ್ಜಿಯೇ ಕಾರಣ ಎಂದು ಪೊಲೀಸರ ಮುಂದೆ ಬಾಲಕ ಹೇಳಿಕೆ ನೀಡಿದ್ದಾನೆ.
ಹೌದು..ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಮಹಿಳೆಯೊಬ್ಬರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆ ಆಗಿತ್ತು. ಮೃತ ಮಹಿಳೆಯ 6 ವರ್ಷದ ಮಗ ತನ್ನ ತಂದೆ ಹಾಗೂ ಅಜ್ಜಿಯೇ ನನ್ನ ತಾಯಿಯನ್ನು ಲೈಟರ್‌ನಿಂದ ಸುಟ್ಟಿದ್ದಾರೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಸಾಮಾಜಿಕ ಜಾಲತಾಣಲದಲ್ಲಿ ಈ ಸಂಬಂಧ ವಿಡಿಯೋ ಕೂಡಾ ವೈರಲ್ ಆಗಿದೆ. ಮಹಿಳೆಯೊಬ್ಬರ ಮೇಲೆ ಅತ್ತೆ ಹಾಗೂ ಪತಿ ಮನಬಂದಂತೆ ಥಳಿಸುತ್ತಿರುವುದು ಕೂದಲನ್ನು ಹಿಡಿದು ಎಳೆದಾಡುತ್ತಿರುವುದು ಅದರಲ್ಲಿ ಕಾಣಿಸಿಕೊಂಡಿದೆ. ಇದಾದ ಬಳಿಕ ಮಹಿಳೆಯನ್ನು ಬೆಂಕಿ ಹಚ್ಚಿ ಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನೊಂದು ವೀಡಿಯೊದಲ್ಲಿ ಮಹಿಳೆ ಬೆಂಕಿ ಹಚ್ಚಿದ ನಂತರ ಮೆಟ್ಟಿಲುಗಳ ಕೆಳಗೆ ಕುಂಟುತ್ತಾ ಇಳಿಯುವುದು ಕಾಣಿಸಿಕೊಂಡಿದೆ. ಗ್ರೇಟರ್ ನೋಯ್ದಾದ ಕಾಸ್ನಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿರ್ಸಾ ಗ್ರಾಮದಲ್ಲಿ ನಡೆದ ಘಟನೆಯ ವಿಡಿಯೋವನ್ನು ಬಲಿಪಶುವಿನ ಅಕ್ಕ ಕಾಂಚನ್ ಸೆರೆಹಿಡಿದಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಪೊಲೀಸರು ಆಗಸ್ಟ್ 23 ರಂದು ಆರೋಪಿಗಳಾದ ಮಹಿಳೆಯ ಪತಿಯನ್ನು ಬಂಧಿಸಿದ್ದಾರೆ. ಇತರರನ್ನು ಬಂಧಿಸಲು ಹುಡುಕಾಟ ನಡೆಸಲಾಗುತ್ತಿದೆ.
ಶಾಕಿಂಗ್ ಘಟನೆಯ ಬಗ್ಗೆ ಮೃತ ಮಹಿಳೆಯ 6 ವರ್ಷದ ಬಾಲಕ ಇಂಚಿಂಚು ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ. ನನ್ನ ಅಮ್ಮನ ಮೈ ಮೇಲೆ ಏನೋ ದ್ರವವನ್ನು ಹಾಕಿದ್ದರು. ನಂತರ ಲೈಟರ್ ಸಹಾಯದಿಂದ ಬೆಂಕಿ ಹಚ್ಚಿದ್ದರು ಎಂದು ಬಾಲಕ ತನ್ನ ಕಣ್ಣಾರೆ ಕಂಡ ವಿಚಾರವನ್ನು ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.