Kannada NewsLatestNational

*ಪತ್ನಿಯನ್ನು ರಸ್ತೆಯಲ್ಲಿ ಧರ ಧರನೆ ಎಳೆದೊಯ್ದ ಪತಿ*

ಪ್ರಗತಿವಾಹಿನಿ ಸುದ್ದಿ; ಹರ್ಯಾಣ: ದೇಶ ಎಷ್ಟೇ ಮುಂದುವರಿದರೂ ಮಹಿಳೆಯರ ಮೇಲಿನ ದೌರ್ಜನ್ಯ, ವರದಕ್ಷಿಣೆ ಕಿರುಕುಳದಂತಹ ಪಿಡುಗು ಮಾತ್ರ ನಿಂತಿಲ್ಲ. ಪತಿ ಮಹಾಶಯನೊಬ್ಬ ಪತ್ನಿಯನ್ನು ನಡು ರಸ್ತೆಯಲ್ಲಿ ಜುಟ್ಟು ಹಿಡಿದು ಧರ ಧರನೆ ಎಳೆದೊಯ್ದಿರುವ ಘಟನೆ ಪಂಜಾಬ್ ನಲ್ಲಿ ನಡೆದಿದೆ.

ಪಂಜಾಬ್ ನ ಗುರುದಾಸ್ ಪುರದ ಚೋಧ್ಯಾನ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಪತಿ, ಪತ್ನಿಯೊಂದಿಗೆ ಮನುಷತ್ವವನ್ನೂ ಮರೆತು ವರ್ತಿಸಿದ್ದು, ರಸ್ತೆಯಲ್ಲಿ ಎಳೆದೊಯ್ದಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯ ವೈರಲ್ ಆಗಿದೆ.

Home add -Advt

ಪತಿ ಹಾಗೂ ಆತನ ಕುಟುಂಬದವರು ನೀಡುತ್ತಿದ್ದ ಹಿಂಸೆ ತಾಳಲಾರದೇ ಮೀನಾ ಎಂಬ ಮಹಿಳೆ ತವರು ಮನೆ ಸೇರಿದ್ದಳು. ಇದರಿಂದ ಕುಪಿತನಾದ ಪತಿ, ಪತ್ನಿಯ ತವರಿಗೆ ಧಾವಿಸಿ, ಹಲ್ಲೆ ನಡೆಸಿ ಆಕೆಯ ಕೂದಲನ್ನು ಹಿಡಿದು ರಸ್ತೆಯಲ್ಲ ಎಳೆದುಕೊಂಡು ಬಂದಿದ್ದಾನೆ. ರಸ್ತೆ ಅಕ್ಕಪಕ್ಕದಲ್ಲಿದ್ದ ಸಾರ್ವಜನಿಕರು ಘಟನೆಗೆ ಮೂಕಪ್ರೇಕ್ಷಕರಾಗಿದ್ದಾರೆ.

ಮಹಿಳೆ ತನ್ನ ತಾಯಿ ಭೈನಿ ಮಿಯಾನ್ ಜೊತೆ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ವರದಕ್ಷಿಣೆ ತರುವಂತೆ ಪತಿ ಹಾಗೂ ಅತ್ತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ತಂದೆ ಆರೋಗ್ಯ ಸರಿಯಿಲ್ಲ, ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ, ಹಣತರಲು ಸಾಧ್ಯವಿಲ್ಲ ಎಂದು ಹೇಳಿದರೂ ಹಿಂಸೆ ನೀಡಿತ್ತಿದ್ದರು. ಕಿರುಕುಳಕ್ಕೆ ನೊಂದು ಮನೆ ಬಿಟ್ಟು ಹೋಗಲು ನಿರ್ಧರಿಸಿ ತವರಿಗೆ ಹೋಗಿದ್ದೆ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.


Related Articles

Back to top button