Belagavi NewsBelgaum News

*ಜ್ಯೋತಿಪ್ರಸಾದ ಜೊಲ್ಲೆ ಜನ್ಮದಿನದ ಅಂಗವಾಗಿ ಯಕ್ಸಾಂಬಾದಲ್ಲಿ ನಡೆಯಿತು “ಪ್ರೇರಣಾ ಉತ್ಸವ”*

ಪ್ರಗತಿವಾಹಿನಿ ಸುದ್ದಿ: ಭಗವಂತ ಎಲ್ಲವನ್ನು ಎಲ್ಲರಿಗೂ ಕೊಟ್ಟಿರುವುದಿಲ್ಲಾ, ಆದರೆ ಯಾರಿಗೆ ಭಂಗವಂತ ಕೊಟ್ಟಿರುತ್ತಾನೊ ಅವರು ಹಂಚಬೇಕು. ಅಂದಾಗ ಮಾತ್ರ ಪಾಪ ಮತ್ತು ಶಾಪ ಪರಿಹಾರವಾಗುತ್ತದೆ ಎಂದು ಕವಲಹುಡ್ಡದ ಶ್ರೀ ಅಮರೇಶ್ವರ ಮಹಾರಾಜರು ಹೇಳಿದರು.

ಯಕ್ಸಾಂಬಾ ಪಟ್ಟಣದ ನಣದಿ ಕ್ಯಾಂಪಸ್‍ನಲ್ಲಿ ಆಯೋಜಿಸಿದ ಪ್ರೇರಣಾ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜೊಲ್ಲೆ ದಂಪತಿಗಳು ದಿವ್ಯಾಂಗ ಮಕ್ಕಳ ಭವಿಷ್ಯ ರೋಪಿಸಿ ಬೆಳಕನ್ನು ನೀಡುವ ಕೆಲಸ ಮಾಡುತ್ತರಿರುವುದನ್ನು ಎಲ್ಲರೂ ಮೆಚ್ಚಲೇ ಬೇಕಾದ ವಿಷಯ ಎಂದು ಹೇಳಿದರು.

ಜಾರಕಿಹೋಳಿ ಮಠದ ಶ್ರೀ ಕೃಪಾನಂದ ಮಹಾಸ್ವಾಮಿಜಿ ಮಾತನಾಡಿ, ಜೊಲ್ಲೆ ಕುಟುಂಬಕ್ಕೆ ಪ್ರೇರಣೆಯಾಗಿರುವ ಜ್ಯೋತಿಪ್ರಸಾದ ಜೊಲ್ಲೆ ಅವರ ಜನ್ಮದಿನವನ್ನು “ಪ್ರೇರಣಾ
ಉತ್ಸವ” ಎಂದು ಆಚರಿಸುವ ಮೂಲಕ ದಿವ್ಯಾಂಗ ಮಕ್ಕಳನ್ನು ಜೊಲ್ಲೆ ದಂಪತಿಗಳು ಎಲ್ಲರನ್ನೂ ಪ್ರೀತಿಸುತ್ತಾರೆ ಎಂಬುದಕ್ಕೆ ನಿದರ್ಶನವಾಗಿದ್ದು, ಪ್ರತಿಯೊಂದು ವಸ್ತುವಿಗೆ ಸಂಸ್ಕಾರ ನೀಡಿದಾಗ ಅದಕ್ಕೆ ನಿಜವಾದ ಸ್ವರೂಪ ಬರುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಶಾಸಕಿ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ಜೊಲ್ಲೆ ಗ್ರೂಪ್ ಕಳೆದ ಹಲವು ವರ್ಷಗಳಿಂದ ಸಹಕಾರ, ಶಿಕ್ಷಣ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದೆ, ಮಠಾಧೀಶರ ಮತ್ತು ಗುರುಹಿರಿಯರ ಮಾರ್ಗದರ್ಶನದಿಂದ ಸಮಾಜ ಮುಖಿ ಕೆಲಸ ಮಾಡುತ್ತಾ ಬಂದಿದ್ದೆವೆ ಎಂದು ಹೇಳಿದರು.

ವಿವಿಧ ಸ್ಪರ್ಧೆಗಳಿಲ್ಲಿ ಭಾಗವಹಿಸಿದ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಣೆ ಮಾಡಿದರು. ಬಸವಜೋತಿ ಫೌಂಡೆಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವೇದಿಕೆಯ ಮೇಲೆ ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಪ್ರೀಯದರ್ಶಿನಿ ಜೊಲ್ಲೆ, ಜಯಾನಂದ ಜಾಧವ, ಅಪ್ಪಾಸಾಹೇಬ ಜೊಲ್ಲೆ, ಲಕ್ಷ್ಮಣ ಕಬಾಡೆ, ಜಗದೀಶ ಜಾಧವ, ಮಂಗಲ ಜೊಲ್ಲೆ, ಅನ್ನರ ದಾಡಿವಾಲೆ, ಸದಾಶಿವ ಕೋಕಣೆ ಸೇರಿದಂತೆ ಜೊಲ್ಲೆ ಗ್ರುಪ್ ನ ವಿವಿಧ ಅಂಗ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button