Election NewsNationalPolitics

*ದೆಹಲಿ ಚುನಾವಣೆ: ನಾಮಪತ್ರ ಸಲ್ಲಿಸಿದ 1521ಅಭ್ಯರ್ಥಿಗಳು*

ಪ್ರಗತಿವಾಹಿನಿ ಸುದ್ದಿ : ರಾಷ್ಟ್ರರಾಜಧಾನಿ ದೆಹಲಿಯ ವಿಧಾನಸಭಾ ಎಲೆಕ್ಷನ್ ಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಚುನಾವಣಾ ಕಾವು ಜೋರಾಗಿದ್ದು, ಎಲ್ಲಾ ಪಕ್ಷಗಳಿಂದ ಪ್ರಚಾರ ಭರಾಟೆ ಜೋರಾಗಿದೆ.

ಈ ನಡುವೆ ಒಟ್ಟು 981 ಮಂದಿ ಹುರಿಯಾಳುಗಳು ದೆಹಲಿ ಅಖಾಡದಲ್ಲಿ ಸ್ಪರ್ಧಿಸೋಕೆ ನಾಮಪತ್ರ ಸಲ್ಲಿಸಿದ್ದಾರೆ. 1521 ನಾಮಿನೇಷನ್ ಸಲ್ಲಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಜನವರಿ 17 ರ ಕೊನೆ ದಿನ 680 ನಾಮಪತ್ರ ಸಲ್ಲಿಕೆಯಾಗಿದೆ. ಶನಿವಾರ ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಜನವರಿ 20 ಕೊನೆಯ ದಿನವಾಗಿದೆ.

ದಿಲ್ಲಿಯ 70 ಕ್ಷೇತ್ರಗಳಿಗೆ ಫೆ.5ಕ್ಕೆ ಎಲೆಕ್ಷನ್ ನಡೆಯಲಿದ್ದು ಫೆ.8ಕ್ಕೆ ರಿಸಲ್ಟ್ ಹೊರಬೀಳಲಿದೆ. ಶುಕ್ರವಾರ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿ ಈಗ ಅಸ್ತಿತ್ವದಲ್ಲಿರುವ ಎಲ್ಲಾ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಮುಂದುವರೆಸುವುದಾಗಿ ಭರವಸೆ ನೀಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button