Latest
ಹಳಿ ತಪ್ಪಿದ ಇಂಟರ್ ಸಿಟಿ ರೈಲು

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಬೆಂಗಳೂರು-ತಾಳಗುಪ್ಪ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿದ ಪರಿಣಾಮ ಈ ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದೆ.
ಹೊಸನಗರ ತಾಲೂಕಿನ ಅರಸಾಳು ಸಮೀಪ ರೈಲು ಹಳಿ ತಪ್ಪಿದೆ. ತಿರುವಿನಲ್ಲಿ ರೈಲು ನಿಧಾನವಾಗಿ ಚಲಿಸುತ್ತಿದ್ದ ಕಾರಣ ಸಂಭವನೀಯ ಅನಾಹುತ ತಪ್ಪಿದೆ.
ಡ್ರಿಲ್ ಮೆಲ್ಟ್ ಕಟ್ ಆಗಿದ್ದೇ ಘಟನೆಗೆ ಕಾರಣವಾಗಿದ್ದು, ರೈಲ್ವೆ ಇಂಜಿನ್ ಗಾಲಿ ಹಳಿಯಿಂದ ಜಾರಿದೆ. ಪ್ರಯಾಣಿಕರಿಗೆ ರೈಲ್ವೆ ಇಲಕಹೆ ಪರ್ಯಾಯ ವ್ಯವಸ್ಥೆ ಮಾಡಿದೆ.




