Kannada NewsLatest

ಯುವಕನ ಕೊಲೆ

ಪ್ರಗತಿವಾಹಿನಿ ಸುದ್ದಿ, ಮಾಂಜರಿ:

ಐನಾಪೂರ – ಕುಡಚಿ ರಸ್ತೆ ಮಧ್ಯದ ಕಬ್ಬಿನ ಗದ್ದೆಯಲ್ಲಿ ಶವ ಪತ್ತೆಯಾಗಿದ್ದು ಸುಮಾರು 37 ವಯಸ್ಸಿನ ವ್ಯಕ್ತಿಯನ್ನ ಕೊಲೆ ಮಾಡಲಾಗಿದೆ.

Home add -Advt

ಶವದ ಕಿಸೆಯಲ್ಲಿ ಪ್ಯಾನ್ ಕಾರ್ಡ್ಗೆ ನೀಡಲು ಬೇಕಾದ ದಾಖಲಾತಿಗಳು ಸಿಕ್ಕಿದ್ದು, ಆ ದಾಖಲಾತಿಗಳ ಪ್ರಕಾರ ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲೂಕಿನ ಹಳಿಂಗಳಿ ಗ್ರಾಮದ ಪಾರೀಸ್ ಜಿನಪ್ಪ ಜಮಖಂಡಿ (37) ಎಂದು ಗುರುತಿಸಿಲಾಗಿದೆ.

ಸ್ಥಳಕ್ಕೆ ಬೆಳಗಾವಿ ಶ್ವಾನದಳ, ಬೆರಳಚ್ಚು ತಜ್ಞರು ಬಂದು ಪರಿಶೀಲಿಸಿದ್ದು. ಅಥಣಿ ಡಿವೈಎಸ್ಪಿ ರಾಮಗೊಂಡ ಬಸರಗಿ, ಸಿಪಿಐ ಅಲಿಸಾಬ್ ಐ.ಬಿ ಹಾಗೂ ಕಾಗವಾಡ ಪಿಎಸ್ಐ ಹಣಮಂತ ಶಿರಹಟ್ಟಿ, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Related Articles

Back to top button