Kannada NewsKarnataka NewsLatest

*ಚಿರತೆ ಸೆರೆ ಹಿಡಿದು ಬೈಕ್ ಗೆ ಕಟ್ಟಿ ಅರಣ್ಯ ಇಲಾಖೆಗೆ ತಂದೊಪ್ಪಿಸಿದ!*

ಪ್ರಗತಿವಾಹಿನಿ ಸುದ್ದಿ; ಹಾಸನ: ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯಬೇಕೆಂದರೆ ಏನೆಲ್ಲ ಸಾಹಸಗಳನ್ನು ಮಾಡುತ್ತಾರೆ. ಹೀಗಿರುವಾಗ ಇಲ್ಲೊಬ್ಬ ಯುವಕ ಚಿರತೆಯನ್ನು ಸ್ವತ: ಹಿಡಿದು ಅರಣ್ಯ ಇಲಾಖೆಗೆ ತಂದು ಒಪ್ಪಿಸಿದ್ದಾನೆ.

ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಬಾಗಿವಾಳು ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೇಣುಗೋಪಾಲ್ ಎಂಬ ಯುವಕ ತನ್ನ ಜಮೀನಿಗೆ ಬಂದಿದ್ದ ಚಿರತೆಯನ್ನು ಹೇಗೋ ದುಸ್ಸಾಹಸ ಮಾಡಿ ಸೆರೆ ಹಿಡಿದಿದ್ದಾನೆ. ಹೀಗೆ ಚಿರತೆಯನ್ನು ಹಿಡಿದವನೇ ಅದರ ಕೈಕಾಲು ಕಟ್ಟಿ ಬೈಕ್ ಗೆ ಚಿರತೆಯನ್ನು ಕಟ್ಟಿಕೊಂಡು ಅರಣ್ಯ ಇಲಾಖೆಗೆ ತಂದು ಒಪ್ಪಿಸಿದ್ದಾನೆ.

Home add -Advt

ಚಿರತೆ ಹಿಡಿಯುವ ಸಾಹಸದಲ್ಲಿ ಯುವಕನಿಗೆ ಗಾಯಗಳಾಗಿವೆ. ಯುವಕನ ಸಾಹಸಕ್ಕೆ ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿ ಬೆರಗಾಗಿದ್ದಾರೆ. ಸೆರೆ ಹಿಡಿದ ಚಿರತೆಗೆ ಗಂಡಸಿ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.


Related Articles

Back to top button