Latest

ಚುನಾವಣೆ ತರಬೇತಿಗೆ ಹಾಜರಾಗಲು ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಲೋಕಸಭಾ ಚುನಾವಣೆ 2019ರ ಕುರಿತು ಜಿಲ್ಲೆಯ 18 ವಿಧಾನ ಸಭಾ ಮತಕ್ಷೇತ್ರಗಳಿಗೆ ಮತಗಟ್ಟೆಗಳಿಗನುಸಾರವಾಗಿ ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಮತಗಟ್ಟೆ ಅಧ್ಯಕ್ಷಾರಿಗಳನ್ನು ನೇಮಕ ಮಾಡಿ ಆದೇಶ ಜಾರಿಗೊಳಿಸಲಾಗಿದೆ. ಚಿಕ್ಕೋಡಿ, ಬೆಳಗಾವಿ ಹಾಗೂ ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರಗಳ ಮತಗಟ್ಟೆಗಳಿಗನುಸಾರವಾಗಿ ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳಿಗೆ ಏ.೭ ರಂದು ಆಯಾ ತಾಲೂಕಾ ಕೇಂದ್ರ ಸ್ಥಾನಗಳಲ್ಲಿ ತರಬೇತಿಯನ್ನು ಆಯೋಜಿಸಲಾಗಿದ್ದು, ನೇಮಕಗೊಂಡಿರುವ ಅಧಿಕಾರಿ, ಸಿಬ್ಬಂದಿಗಳು ತರಬೇತಿಗೆ ಹಾಜರಾಗಲು ಸೂಚಿಸಲಾಗಿದೆ. ತರಬೇತಿಗೆ ಗೈರು ಹಾಜರಾದರೆ ಪ್ರಜಾ ಪ್ರತಿನಿಧಿ ಕಾಯ್ದೆಯನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಚ್.ಬಿ. ಬೂದೆಪ್ಪ ತಿಳಿಸಿದ್ದಾರೆ.

Related Articles

Back to top button