Latest

ಫರ್ಸ್ಟ ಗೇಟ್ ಬ್ಯಾರಿಕೇಡ್ ತೆಗೆಯಲಾಗದು -ಪೊಲೀಸ್ ಸ್ಪಷ್ಟನೆ

   

 

  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮೊದಲ ರೇಲ್ವೆ ಗೇಟ್ ಹತ್ತಿರ ಹಾಕಿದ ಬ್ಯಾರಿಕೇಡ್ ತೆರವುಗೊಳಿಸದೆ ಸುರಕ್ಷತಾ ದೃಷ್ಟಿಯಿಂದ ಮುಂದುವರಿಸಲಾಗುತ್ತದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಇಲಾಖೆ, ಸಂಚಾರ ದಕ್ಷಿಣ ಪೊಲೀಸ್ ಠಾಣೆಯ ವ್ಯಾಪ್ತಿಯ 1ನೇ ರೇಲ್ವೆ ಗೇಟ್ ಸುಗಮ ಸಂಚಾರ ವ್ಯವಸ್ಥೆ ಕುರಿತು ಮಿಲೇನಿಯಮ್ ಗಾರ್ಡನ್ ಕಡೆಯಿಂದ ಅಂದರೆ ಗೋವಾವೇಸ್ ಸರ್ಕಲ್ ಹಾಗೂ ದೇಶಮುಖ ರಸ್ತೆ ಮೂಲಕ ಕಾಂಗ್ರೇಸ್ ರೋಡ್ ದಾಟಿ ಸಾಗುವ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡಿಗಳನ್ನು ಹಾಕಿ ರಸ್ತೆಯನ್ನು ಬಂದ್ ಮಾಡಲಾಗಿದೆ. ಈ ಬ್ಯಾರಿಕೇಡಿಂಗ್ ಮಾಡಿದ ರಸ್ತೆಯು ನಾಲ್ಕು ರಸ್ತೆಗಳು ಸೇರುವ ಜಂಕ್ಷನ್‌ ಆಗಿದ್ದು ಈ ಜಂಕ್ಷನ್‌ನಲ್ಲಿ ಖಾನಾಪುರ ಕಡೆಯಿಂದ ಬೆಳಗಾವಿ ನಗರಕ್ಕೆ ಭಾರಿ ವಾಹನಗಳ ಹಾಗೂ ಬೆಳಗಾವಿ ನಗರದಿಂದ ಖಾನಾಪುರ ಕಡೆಗೆ ಭಾರಿ ವಾಹನಗಳ ಸಂಚಾರ ಇರುತ್ತದೆ.
ಈ ಸ್ಥಳದಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ, ಅಲ್ಲದೆ ಮಂಡೋಳಿ ಗ್ರಾಮಕ್ಕೆ ಹಾಗೂ ಚೌಗಲೇವಾಡಿ ಕಡೆಗೆ ಸಂಚಾರಿಸುವ ವಾಹನಗಳು ಈ ಜಂಕ್ಷನ್ ಸ್ಥಳದಿಂದ ಸಾಗಿ ಹೋಗುವುದರಿಂದ ಹಾಗೂ ಶಾಲಾ ಮಕ್ಕಳು ರಸ್ತೆಯನ್ನು ದಾಟುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಾಂಗ್ರೇಸ್ ರಸ್ತೆಯ 1ನೇ ರೇಲ್ವೆ ಗೇಟ್ ಹತ್ತಿರ ಹಾಕಿದ ಬ್ಯಾರಿಕೇಡ್ ಗಳನ್ನು ರೇಲ್ವೆ ಓವರ್ ಬ್ರಿಡ್ಜ್ ಆದರೂ ಹಾಗೇಯೇ ಮುಂದುವರಿಸಲಾಗಿದ್ದು, ದೇಶಮುಖ ರೋಡ್ ಮತ್ತು ಗೋವಾವೇಸ್‌ನಲ್ಲಿ ಹಾಕಿದ ಬ್ಯಾರಿಕೇಡ್ ಗಳನ್ನು ತೆಗೆಯಲಾಗಿದೆ.
ರಸ್ತೆ ಸುರಕ್ಷತೆ ಹಾಗೂ ಸಾರ್ವಜನಿಕ ಸುಗಮ ಸಂಚಾರದ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button