Latest

ಬಂಗಾರದ ಚೀಲ ಕದ್ದೊಯ್ದಿದ್ದ ಅಂತರಾಜ್ಯ ಕಳ್ಳರ ಬಂಧನ

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರಃ

ಹಗಲು ಹೊತ್ತಿನಲ್ಲೆ ಬಂಗಾರ ಅಂಗಡಿಯಿಂದ ಬಂಗಾರದ ಆಭರಣಗಳಿರುವ ಬ್ಯಾಗ್‍ನ್ನು ಕಳುವು ಮಾಡಿದ ಅಂತರ್ ರಾಜ್ಯ ಕಳ್ಳರನ್ನು ಕಿತ್ತೂರ ಠಾಣೆಯ ಪೋಲಿಸರು ಬುಧವಾರ ಬಂಧಿಸಿದ್ದಾರೆ.
ಆರೋಪಿಗಳಾದ ಬಳ್ಳಾರಿಯ ರಾಮು ವೆಂಕಟೇಶ(20), ಭದ್ರಾವತಿಯ ಸುಭಾಸ ನಗರದ ರಾಮು
ಪಕ್ಕಿರಪ್ಪ(52) ಹಾಗೂ ಭದ್ರಾವತಿಯ ಹೊಸ ಮನೆಯ ಮಂಜ್ಯಾ ಅಲಿಯಾಸ್ ಕೆ.ಮಂಜುನಾಥ
ರಾಮು(40) ಬಂಧಿತರು.
ಇವರಿಂದ 8,49,812 ಬೆಲೆ ಬಾಳುವ 313 ಗ್ರಾಂ ತೂಕದ ಬಂಗಾರ ಹಾಗೂ 14 ಸಾವಿರ ನಗದು ಹಣವನ್ನು
ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ಆರೋಪಿಗಳ ಪತ್ತೆಗಾಗಿ ಕಿತ್ತೂರು ಪೊಲೀಸರು ಜಾಲ ಬೀಸಿದ್ದಾರೆ.
ಪಟ್ಟಣದ ಕಾಲೇಜ ರೋಡಲ್ಲಿರುವ ವಿನಾಯಕ ಜ್ಯುವೆಲರ್ಸ ಅಂಗಡಿಯಲ್ಲಿ ಸೆ.29 ರಂದು ಅಂಗಡಿಯ
ಮಾಲಿಕ ಎಂದಿನಂತೆ ಬಂದು ಮುಂಜಾನೆ ಅಂಗಡಿಯ ಒಂದು ಬಾಗಿಲನ್ನು ತೆರೆದು ಮತ್ತೊಂದು ಬಾಗಿಲನ್ನು ತೆರೆಯುವಷ್ಟರಲ್ಲಿ ಕಳ್ಳರು ಬಂಗಾರವಿರುವ ಬ್ಯಾಗ್‍ನ್ನು ಕಳತನ ಮಾಡಿ ಪರಾರಿಯಾಗಿದ್ದರು.
ಸಿಪಿಐ ರಾಘವೇಂದ್ರ ಹವಾಲ್ದಾರ, ಬೆಳಗಾವಿ ಪಿ.ಎಸ್.ಐ, ಡಿ.ಎಸ್.ಬಿ ನಿಂಗನಗೌಡ ಪಾಟೀಲ, ಕಿತ್ತೂರು ಪಿಎಸ್‍ಐ ವಿರಣ್ಣ ಲಟ್ಟಿ, ಎ.ಎಸ್.ಐ ಡಿ.ಬಿ ಈಟಿ, ಕಿತ್ತೂರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎಲ್.ಎಚ್ ನಾಯ್ಕರ, ಆಯ್.ಎನ್. ಜಿನ್ನವ್ವಗೋಳ, ಎನ್.ಆರ್ ಗಳಗಿ, ವಿ.ಎ ಠಕ್ಕನವರ, ಎಸ್. ಆಯ್ ಮಾನ್ಯದಮಠ, ಎಸ್.ಎಸ್ ಕಾಜಗಾರ, ಶ್ರೀ ಸಿ.ಎಸ್. ಬುದ್ನಿ, ಆರ್.ಐ ಕಾಜಗಾರ, ಕೆ.ವಿ ಮಗದುಮ್, ಎಲ್, ಎಫ್
ಜಂಬಲವಾಡ, ಎ.ಎಫ್ ಭಜಂತ್ರಿ ಹಾಗೂ ಬೆಳಗಾವಿ ಜಿಲ್ಲಾ ಪೊಲೀಸ್ ಕಛೇರಿಯ ಟೆಕ್ನಿಕಲ್ ಸೆಲ್ ವಿಭಾಗದ ಸಿಬ್ಬಂದಿ ಸಚೀನ ಪಾಟೀಲ ಇವರನ್ನೊಳಗೊಂಡ ತನಿಖಾ ತಂಡ ಆರೋಪಿತರ ಪತ್ತೆಗಾಗಿ ಶ್ರಮಿಸಿದ್ದಾರೆ ಎಂದು ಕಿತ್ತೂರು ಪೊಲೀಸರು ತಿಳಿಸಿದ್ದಾರೆ.

Home add -Advt

Related Articles

Back to top button