Latest

ಬಸ್ಸಿನಲ್ಲಿ ಸಾಗಿಸುತ್ತಿದ್ದ ಗೋವಾ ಮದ್ಯ ವಶ: ಓರ್ವನ ಬಂಧನ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: 

ತಾಲ್ಲೂಕಿನ ಕಣಕುಂಬಿ ಬಳಿಯ ಅಬಕಾರಿ ತನಿಖಾ ಠಾಣೆಯಲ್ಲಿ ಗುರುವಾರ ಗೋವಾದಿಂದ ಬೆಳಗಾವಿಯತ್ತ ಹೊರಟಿದ್ದ ವಾಯುವ್ಯ ಸಾರಿಗೆ ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಗೋವಾ ಮದ್ಯವನ್ನು ತನಿಖಾ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. 

Home add -Advt

ಕಣಕುಂಬಿ ತನಿಖಾ ಠಾಣೆಯಲ್ಲಿ ಬಸ್ ತಪಾಸಣೆ ವೇಳೆ ಬಸ್ಸಿನ ಚೀಲವೊಂದರಲ್ಲಿ ಇರಿಸಿದ್ದ 750 ಮಿ.ಲೀ ಸಾಮಥ್ರ್ಯದ 9 ಬಾಟಲ್ ಬುಲೆಟ್ ಫೆನ್ನಿ ಮತ್ತು 1 ಬಾಟಲ್ ಹನಿ ಬೀ ವಿಸ್ಕೀ ವಶಕ್ಕೆ ಪಡೆಯಲಾಗಿದೆ. ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ
ಆರೋಪದಡಿ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಖಾನಾಪುರ ಅಬಕಾರಿ ಠಾಣೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related Articles

Back to top button