Belagavi NewsBelgaum NewsCrimeKarnataka NewsLatest
*ರಮೇಶ್ ಜಾರಕಿಹೊಳಿ ಗನ್ಮ್ಯಾನ್ನಿಂದಲೇ ದರೋಡೆಗೆ ಯತ್ನ*: *7 ಆರೋಪಿಗಳು ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಗನ್ಮ್ಯಾನ್ನಿಂದಲೇ ಹಣಣ ದುಪ್ಪಟ್ಟು ಮಾಡಿಕೊಡುವ ಹೆಸರಲ್ಲಿ ದರೋಡೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಅಕ್ಟೋಬರ್ 30ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮನಿ ಡಬ್ಲಿಂಗ್ ಹೆಸರಲ್ಲಿ 2.68 ಕೋಟಿ ರೂ ದರೋಡೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ.
ಪ್ರಕರಣ ಸಂಬಂಧ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ. ಗನ್ಮ್ಯಾನ್ ಚಿದಾನಂದ ಕುರಬೆಟ್, ಸಂಜೀವ್ ಅರಭಾವಿ, ರಾಜಾರಾಮ್, ರಮೇಶ್ ಮಾಳ್ಯಾಗೋಳ, ಪ್ರಕಾಶ್, ರಾಘವೇಂದ್ರ ಕೊಪ್ಪದ್, ರಾಮಪ್ಪ ತಳವಾರ ಬಂಧಿತರು. ಈ ಸಂಬಂಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




