ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ನಗರದ ಸಾಮಾಜಿಕ ಸೇವಾ ಸಂಸ್ಥೆ ನಿಯತಿ ಫೌಂಡೇಶನ್ ವತಿಯಿಂದ ಬಾಲಿಕಾ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿಯರಿಗಾಗಿ ಗ್ಲೋಬ್ ಚಿತ್ರ ಮಂದಿರದಲ್ಲಿ ಆನಂದಿ ಗೋಪಾಲ ಮರಾಠಿ ಚಲನಚಿತ್ರದ ಉಚಿತ ಪ್ರದರ್ಶನ ವ್ಯವಸ್ಥೆ ಮಾಡಲಾಗಿತ್ತು.
ಹಿಂದಿನ ಕಾಲದ ಸಾಮಾಜಿಕ ವ್ಯವಸ್ಥೆಯ ಪರಿಕಲ್ಪನೆ, ಮಹಿಳೆಯರು ಶಿಕ್ಷಣ ಪಡೆಯಲು ಇದ್ದ ಅಡೆತಡೆಗಳು ಹಾಗೂ ಅದನ್ನೆಲ್ಲ ಮೀರಿ ಶಿಕ್ಷಣ ಪಡೆದು ಸಮಾಜದಲ್ಲಿ ಮನ್ನಣೆ ಗಳಿಸಿದ ಆನಂದಿ ಗೋಪಾಲ ಬಗ್ಗೆ ತಿಳಿದುಕೊಳ್ಳಲು ಈ ಚಿತ್ರ ಪ್ರೇರಣೆ ನೀಡಿತು.
ನಿಯತಿ ಫೌಂಡೇಶನ್ ಸಂಸ್ಥಾಪಕಿ, ಅಧ್ಯಕ್ಷೆ ಡಾ. ಸೋನಾಲಿ ಸರನೋಬತ್, ಡಾ. ಸಮೀರ ಸರನೋಬತ್, ಮೋನಾಲಿ ಶಹಾ, ಡಾ. ಭರತ ಚೌಗುಲೆ ಮುಥಾದವರು ಇದ್ದರು. ಆದರ್ಶ ಬಾಲಿಕಾ ವಿದ್ಯಾಲಯದ ಸುಮಾರು ೨೫೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಚಿತ್ರ ವೀಕ್ಷಣೆ ಮಾಡಿದರು.