Latest

ಸ್ಮಾರ್ಟ್ ಸಿಟಿಗೆ ಮಾದರಿಯಾಗಿ ನಾಥ ಪೈ ಗಾರ್ಡನ್ ನಿರ್ಮಾಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

Home add -Advt

ದಕ್ಷಿಣ ವಿಧಾನ ಸಭಾ ಕ್ಷೇತ್ರದ ಟಿಳಕವಾಡಿಯ ನಾಥ ಪೈ ಉದ್ಯಾನವನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 1.20 ಕೋಟಿ ರೂ ವೆಚ್ಚದಲ್ಲಿ ವೈಶಿಷ್ಟಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದ್ದು, ಶೀಘ್ರದಲ್ಲಿಯೇ ಉದ್ಘಾಟನೆಯಾಗಲಿದೆ.

ಉದ್ಯಾನವನದಲ್ಲಿ ವಿವಿಧ ರೀತಿಯ ಅತ್ಯಾಕರ್ಷಕ ಹೂವಿನ ಗಿಡಗಳು, ವಾಕಿಂಗ್ ಪಾತ್, ಜಾಗಿಂಗ್ ಪಾತ್, ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಜೊತೆಗೆ ಗಾರ್ಡ್ ರೂಂ ಸಹ ನಿರ್ಮಿಸಲಾಗಿದೆ.

ಉದ್ಯಾನವನದಲ್ಲಿ ಕೇವಲ ಒಬ್ಬನೇ ಮಾಲಿ ನಿರ್ವಹಣೆ ಮಾಡುವ ರೀತಿಯಲ್ಲಿ  ಸ್ಪಿಂಕ್ಲರ್ ಮತ್ತು ಡ್ರಿಪ್ ಇರಿಗೇಶನ್ ವ್ಯವಸ್ಥೆ ಮಾಡಲಾಗಿದೆ. ಅಂತರಾಷ್ಟ್ರೀಯ ಗಾರ್ಡನ್ ಪರಿಣಿತ ಚವ್ಹಾಣ್  ಸಲಹೆಯನ್ನು ಪಡೆದು ಈ ಉದ್ಯಾನವನ್ನು ಮಾದರಿ ಉದ್ಯಾನವನ್ನಾಗಿ ನಿರ್ಮಿಸಲಾಗಿದ್ದು ಮಾರ್ಚ್ ಐದರೊಳಗಾಗಿ ಇದನ್ನು ಉದ್ಘಾಟಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ

 ಉದ್ಯಾನವನದ ಕಾಮಗಾರಿಗಳನ್ನು ಬುಧವಾರ ಪರಿಶೀಲಿಸಿದ ಅವರು, ಆದಷ್ಟು ಬೇಗ ಉಳಿದಿರುವ ಕಾಮಗಾರಿಗಳನ್ನು ಮುಗಿಸಿ ಈ ಉದ್ಯಾನವನ್ನುಲೋಕಾರ್ಪಣೆ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಗುತ್ತಿಗೆದಾರನಿಗೆ ಸೂಚನೆ ನೀಡಿದರು.

Related Articles

Back to top button