Latest

ಅಂಗಾಂಗಳ ಜಾಗೃತಿ ಮೂಡಿಸುವ ಸೈಕಲ್ ರ‍್ಯಾಲಿಗೆ ಚಾಲನೆ

 

 

  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಜೀವಸಾರ್ಥಕತೆ ಇವುಗಳ ಸಂಯುಕ್ತಾಶ್ರಯದಲ್ಲಿ ಚೆನ್ನೈನ ಮೋಹನ ಪ್ರತಿಷ್ಠಾನವು ಏರ್ಪಡಿಸಿದ್ದ ಅಂಗಾಂಗಳ ಜಾಗೃತಿ ಮೂಡಿಸುವ ಸೈಕಲ್ ರ‍್ಯಾಲಿಗೆ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಡಾ. ವಿ ಎಸ್ ಸಾಧುನವರ ಭಾನುವಾರ ಚಾಲನೆ ನೀಡಿದರು.
ನಂತರ ನಡೆದ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು, ಹಲವು ಜನರ ಜೀವವನ್ನು ಉಳಿಸಬಲ್ಲ ಅಂಗಾಂಗ ದಾನ ಅತ್ಯಂತ ಶ್ರೇಷ್ಠವಾದದ್ದು. ಮೆದುಳು ನಿಷ್ಕೀಗೊಂಡ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡಿ ಜೀವವನ್ನು ಉಳಿಸಿದಾಗ ಮಾತ್ರ ಜೀವನ ಸಾರ್ಥಕವಾಗಬಲ್ಲದು. ಮರಣಾ ನಂತರ ದೇಹವನ್ನು ಸುಡುವುದಾಗಲೀ ಅಥವಾ ಹೂಳುವುದಾಗಲಿ ಮಾಡದೇ ಅದನ್ನು ದಾನ ಮಾಡುವುದು ಅತ್ಯಂತ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಹಿರಿಯ ಹೃದಯ ಹೃದಯ ಶಸ್ತ್ರಚಿಕಿತ್ಸಕರಾದ ಡಾ. ರಿಚರ್ಡ ಸಲ್ಡಾನಾ ಅವರು, ಇತ್ತೀಚಿನ ದಿನಗಳಲ್ಲಿ ಮಾನವ ಅಂಗಾಂಗಗಳ ವೈಫಲ್ಯ ತೀವ್ರಗತಿಯಲ್ಲಿ ಕಂಡುಬರುತ್ತಿದೆ. ಇದರಿಂದ ಅವರ ಜೀವನ ದುಸ್ತರವಾಗುತ್ತಿದ್ದು, ಅರ್ಥಿಕವಾಗಿಯೂ ದುರ್ಬಲರಾಗುತ್ತಿದ್ದಾರೆ. ಕಿಡ್ನಿ ದಾನ ಮಾಡಿದಂತೆ ಹೃದಯ, ಲಂಗ, ಲಿವರ್ ಸೇರಿದಂತೆ ವಿವಿಧ ಅಂಗಗಳನ್ನು ದಾನ ಮಾಡಬೇಕು. ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರೀಯಗೊಂಡು ಜೀವಂತ ಶವವಾಗಿರುವ ವ್ಯಕ್ತಿಯ ಅಂಗಗಳನ್ನು ಬೇರೊಬ್ಬರಿಗೆ ಕಸಿ ಮಾಡಿ ಅವರ ಜೀವ ಉಳಿಸಬಹುದು ಎಂದು ತಿಳಿಸಿದರು.
ಆಸ್ಪತ್ರೆಯ ಕ್ಲಿನಕಲ್ ಸರ್ವಿಸಿಸ್ ನಿರ್ದೇಶಕ ಡಾ. ಆರ್ ಬಿ ನೇರ್ಲಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಈಗಾಗಲೇ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಅಂಗಾಂಗ ಕಸಿ ಕೇಂದ್ರ ಕಾರ‍್ಯನಿರ್ವಹಿಸುತ್ತಿದೆ. ಈ ಕೇಂದ್ರದಲ್ಲಿ ಕಿಡ್ನಿ ಹಾಗೂ ಹೃದಯ ಕಸಿ ಮಾಡಲಾಗುತ್ತಿದ್ದು, ಶೀಘ್ರದಲ್ಲಿಯೇ ಲೀವರ್ ಕಸಿ ಆರಂಭವಾಗಲಿದೆ. ಅದಕ್ಕೆ ಬೇಕಾಗುವ ಸಕಲ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಆದ್ದರಿಂದ ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೆಕಾಗಿದೆ. ಹಲವು ಸರಕಾರೇತರ ಸಂಘಸಂಸ್ಥೆಗಳು ಮುಂದೆ ಬರಬೇಕು ಎಂದು ಕರೆ ನೀಡಿದರು.
ಅಂಗಾಂಗ ದಾನಗಳ ಕುರಿತು ಜಾಗೃತಿ ಮೂಡಿಸುತ್ತ ಸೈಕಲ್ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ವೆಂಕಟೇಶ ಶಿವರಾಮ ಹಾಗೂ ಮಂಜುನಾಥ ನಾಗರಾಜ ಅವರನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಮೋಹನ ಪ್ರತಿಷ್ಠಾನದ ಶ್ರೀಧರ ಹಂಚಿನಾಳ, ಡಾ. ಮೋಹನ ಗಾನ, ಡಾ. ದರ್ಶನ್, ಡಾ. ರಾಜಶೇಖರ ಸೋಮನಟ್ಟಿ ಮುಂತಾದವರು ಉಪಸ್ಥಿತರಿದ್ದರು. ಬೆಳಗಾವಿ ಪೆಡಲರ್ಸ್ ವೇಣುಗ್ರಾಮ ಸೈಕ್ಲಿಸ್ಟ್, ಎಂಎಲ್‌ಐಆರ್‌ಸಿ, ರೋಟರಿ ಕ್ಲಬ್, ಬಿ ಎಂ ಕಂಕಣವಾಡಿ ಆಯುರ್ವೇದಿಕ ಮಹಾವಿದ್ಯಾಲಯ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಸುಮಾರು 180ಕ್ಕೂ ಅಧಿಕ ಸೈಕ್ಲಿಸ್ಟ್ ಗಳು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button