ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ನಗರ ಸಿಸಿಬಿ ಇನ್ಸಪೆಕ್ಟರ್ ಜಿ.ಐ ಕಲ್ಯಾಣಶೆಟ್ಟಿ ಹಾಗೂ ತಂಡದಿಂದ ಅಕ್ರಮ ಮರಳು ಸಾಗಾಟದ ಮೇಲೆ ದಾಳಿ ನಡೆದಿದ್ದು, ಓರ್ವನನ್ನು ಬಂಧಿಸಿ, ಟಿಪ್ಪರ ಸಮೇತ ಮರಳು ಜಪ್ತಿ ಮಾಡಲಾಗಿದೆ.
ಎ.ಪಿ.ಎಮ್.ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಜಯನಗರ ರಸ್ತೆ ಮೂಲಕ ಟಾಟಾ ಟಿಪ್ಪರ್ ನಲ್ಲಿ ಖಾನಾಪುರದ ಲಕ್ಷ್ಮಣ ಮಾರುತಿ ರಾಮಣ್ಣವರ ಎಂಬುವವನು ತನ್ನ ಟಿಪ್ಪರದಲ್ಲಿ ಮರಳನ್ನು ತುಂಬಿಸಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾಗ ಸಿಸಿಬಿ ಘಟಕದ ಇನ್ಸಪೆಕ್ಟರ್ ಜಿ. ಐ ಕಲ್ಯಾಣಶೆಟ್ಟಿ ಮತ್ತು ಅವರ ಸಿಬ್ಬಂದಿಗಳಾದ ಎಚ್.ಎಸ್. ನಿಶನ್ನವರ, ಶ್ರೀಧರ ಎಮ್ ಭಜಂತ್ರಿ, ಯಾಸೀನ್ ಡಿ ನದಾಫ ದಾಳಿ ಮಾಡಿ ಚಾಲಕ ಹಾಗೂ ಮರಳು ತುಂಬಿದ ಟಿಪ್ಪರನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದರು.