ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಅನಧಿಕೃತವಾಗಿ ನಡೆಯುತ್ತಿದ್ದ ಬ್ಲಡ್ ಬ್ಯಾಂಕ್ ಮೇಲೆ ದಾಳಿ ನಡೆಸಿದ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು, ಬ್ಲಡ್ ಬ್ಯಾಂಕ್ ಮುಟ್ಟುಗೋಲು ಹಾಕಿದ್ದಾರೆ.
ಚಿಕ್ಕೋಡಿಯ ಜೀವಧಾರಾ ಮಾತೋಶ್ರೀ ಬ್ಲಡ್ ಬ್ಯಾಂಕ್ ಮುಟ್ಟುಗೋಲು ಹಾಕಲಾಗಿದ್ದು, 96 ಬ್ಲಡ್ ಬ್ಯಾಗ್, 23 ಪ್ಯಾಕ್ಡ್ ಸೆಲ್ಸ್, 21 ಬ್ಲಡ್ ಪ್ಲಾಸ್ಮಾ ವಶಪಡಿಸಿಕೊಳ್ಳಲಾಗಿದೆ. ಡಾ.ಶಿವಾನಂದ ಎನ್ನುವವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಉಪ ಔಷಧ ಆಯುಕ್ತ ದೀಪಕ್ ಗಾಯಕವಾಡ ಮಾರ್ಗದರ್ಶನದಲ್ಲಿ ದಾಳಿ ನಡೆಯಿತು.