Latest

ಅಯ್ಯಪ್ಪಸ್ವಾಮಿ ಮಹಾಪೂಜೆ- ಮಹಾಪ್ರಸಾದ ಕಾರ್ಯಕ್ರಮ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿಯ ಕಣಬರ್ಗಿ ರಸ್ತೆ ರುಕ್ಮಿಣಿ ನಗರದ ಶ್ರೀನವದುರ್ಗಾ ಶ್ರೀ ಅಯ್ಯಪ್ಪ ಸ್ವಾಮಿಯ 22ನೇ ಮಹಾಪೂಜೆ ಕಾರ್ಯಕ್ರಮ ವಿವಿಧ ಕಾರ್ಯಕ್ರಮಗಳೊಂದಿಗೆ ಸಡಗರದಿಂದ ಶನಿವಾರ ಮತ್ತು ಭಾನುವಾರ ಜರುಗಿತು.
ಶನಿವಾರ ಸಂಜೆ ಪಲ್ಲಕ್ಕಿ ಉತ್ಸವ ಜರುಗಿತು. ಈ ನಿಮಿತ್ತ ಶ್ರೀ ಅಯ್ಯಪ್ಪಸ್ವಾಮಿ ಭಾವಚಿತ್ರದ ಮೆರವಣಿಗೆ ನಡೆಯಿತು. ಭಾನುವಾರ ಮುಖ್ಯ ಪೂಜಾ ಕಾರ್ಯಕ್ರಮ ಜರುಗಿತು. ಈ ನಿಮಿತ್ತ ಶ್ರೀ ಅಭಿಷೇಕ ಸಹಸ್ರ ನಾಮಾರ್ಚನೆ, ಭಜನೆ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಮಹಾಪ್ರಸಾದ ಕಾರ್ಯಕ್ರಮ ಜರುಗಿತು. ಸಾವಿರಾರು ಜನ ಪ್ರಸಾದ ಸೇವಿಸಿದರು. ಸಂಜೆ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗಿತು. ಪ್ರಧಾನ ಅರ್ಚಕ ಸುರೇಂದ್ರ ಗುರುಸ್ವಾಮಿಗಳು ನೇತೃತ್ವ ವಹಿಸಿದ್ದರು.
ಈ ಮಹಾಪೂಜಾ ಕಾರ್ಯಕ್ರಮಕ್ಕೆ ಸಂಸದ ಸುರೇಶ ಅಂಗಡಿ, ಶಾಸಕ ಅನಿಲ ಬೆನಕೆ, ಮಹಾಪೌರ ಬಸವರಾಜ ಚಿಕ್ಕಲದಿನ್ನಿ, ಹೊಟೇಲ ಉದ್ಯಮಿ ವಿಠ್ಠಲ ಹೆಗಡೆ ಮೊದಲಾದವರು ಭೇಟಿ ನೀಡಿದ್ದರು.
ಕಾರ್ಯಕ್ರಮದಲ್ಲಿ ಆನಂದ ಶೆಟ್ಟಿ, ಭಾಸ್ಕರ ಪೂಜೇರಿ, ಚೇತನ ಶೆಟ್ಟಿ, ಪ್ರಕಾಶ ಶೆಟ್ಟಿ, ಸುರೇಶ ನಾಯ್ಯರ, ಸತೀಶ ಶೆಟ್ಟಿ, ಮಹಾವೀರ ಜೈನ, ದೀಪಕ ಶಹಾಪೂರ, ಅಶೋಕ ಶಹಾಪೂರ, ಸದಾಶಿವ ಹಿರೇಮಠ, ಮಲ್ಲಿಕಾರ್ಜುನ ಶಿರಗುಪ್ಪಿಶೆಟ್ಟರ, ರಮೇಶ ಪೋತದಾರ, ಗೋಪಾಲ ಖಟಾವಕರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button