ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಬೆಳಗಾವಿ ಕಾರ್ಯಕ್ರಮ ರದ್ದಾಗಿದೆ.
ಇಂದು ವಿಟಿಯು ಘಟಿಕೊತ್ಸವ ಕಾರ್ಯಕ್ರಮಕ್ಕೆ ಅವರು ಬರಬೇಕಿತ್ತು. ಆದರೆ ಮನೋಹರ ಪರಿಕರ್ ನಿಧನದ ಹಿನ್ನೆಲೆಯಲ್ಲಿ ಅವರು ಬೆಳಗಾವಿಗೆ ಬರುವ ಕಾರ್ಯಕ್ರಮ ರದ್ದಾಗಿದೆ.
ರಾಜ್ಯಪಾಲ ವಜುಬಾಯಿ ವಾಲಾ ಕೂಡ ಆಗಮಿಸುತ್ತಿಲ್ಲ.
ವೆಂಕಯ್ಯ ನಾಯ್ಡು ಭೇಟಿ ರದ್ದಾಗಿರುವುದನ್ನು ಪೊಲೀಸ್ ಆಯುಕ್ತ ಲೋಕೇಶ್ ಕುಮಾರ ಪ್ರಗತಿವಾಹಿನಿ ಗೆ ಖಚಿತಪಡಿಸಿದ್ದಾರೆ.
ವಿಟಿಯು ಘಟಿಕೋತ್ಸವ ಕಾರ್ಯಕ್ರಮ ಈಗಾಗಲೆ ಆರಂಭವಾಗಿದೆ.