ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಶುಕ್ರವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಒಟ್ಟೂ 7 ಶಾಸಕರು ಹಾಜರಾಗಲಿಲ್ಲ. ಆದರೆ ಇಬ್ಬರು ಬರಲಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ ಎಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ರೋಷನ್ ಬೇಗ್ ಕೆಲಸದ ನಿಮಿತ್ತ ದೆಹಲಿಯಲ್ಲಿದ್ದಾರೆ. ಬಿ.ಸಿ.ಪಾಟೀಲ ಮಧ್ಯಾಹ್ನ ಬಂದು ಭೇಟಿಯಾಗುವುದಾಗಿ ತಿಳಿಸಿದ್ದಾರೆ. ರಮೇಶ ಜಾರಕಿಹೊಳಿ, ಮಹೇಶ ಕುಮಠಳ್ಳಿ, ನಾಗೇಂದ್ರ, ಉಮೇಶ ಜಾಧವ ಪತ್ರ ಬರೆದು ಬರಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ ಜಿ.ಎನ್.ಗಣೇಶ ಮಾತ್ರ ಎಲ್ಲಿದ್ದಾರೆ ಎನ್ನುವುದು ಗೊತ್ತಿಲ್ಲ, ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಅವರು ಹೇಳಿದರು.
ಉಮೇಶ ಜಾಧವ ಅವರು ಪತ್ರ ಬರೆದು ಮೊದಲೇ ನಿಗದಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬರಲಾಗುವುದಿಲ್ಲ ಎಂದೂ, ರಮೇಶ ಜಾರಕಿಹೊಳಿ ಮದುವೆ ಕಾರ್ಯಕ್ರಮ ಇದೆ ಎಂದು, ಮಹೇಶ ಕುಮಠಳ್ಳಿ ಆರೋಗ್ಯ ಸಮಸ್ಯೆ ಇದೆ ಎಂದು, ನಾಗೇಂದ್ರ ವಯಕ್ತಿಕ ಕೆಲಸ ಇದೆ ಎಂದು ಪತ್ರ ಬರೆದಿದ್ದಾರೆ. 15ನೇ ತಾರೀಖಿನವರೆಗೆ ಬರಲಾಗುವುದಿಲ್ಲ ಎಂದು ಇವರೆಲ್ಲರೂ ತಿಳಿಸಿದ್ದಾರೆ ಎಂದರು ಸಿದ್ದರಾಮಯ್ಯ.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ