ಪ್ರಗತಿವಾಹಿನಿ ಸುದ್ದಿ, ಖಾನಾಪುರ :
ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಖಾನಾಪುರ ಗ್ರಾಮದೇವತೆ ಲಕ್ಷ್ಮಿದೇವಿಯ ಜಾತ್ರೆಯು ಇದೇ ಫೆ.೨೦ ರಿಂದ ನಡೆಯಲಿದೆ. ಫೆ.೨೦ ರಂದು ಬೆಳಗ್ಗೆ ೬ ಗಂಟೆ ೪೯ ನಿಮಿಷದ ಮುಹೂರ್ತದಲ್ಲಿ ಲಕ್ಷ್ಮಿ ದೇವಿಯ ವಿವಾಹ ಮಹೋತ್ಸವದೊಂದಿಗೆ ಜಾತ್ರೆ ಆರಂಭವಾಗಲಿದೆ. ಅಕ್ಷತಾರೋಪಣದ ನಂತರ ಗ್ರಾಮದಲ್ಲಿ ಮೆರವಣಿಗೆ ಹೊರಟು ದೇವಿಯು ಸಂಜೆ ೫ ಗಂಟೆಗೆ ಗದ್ದುಗೆಯಲ್ಲಿ ವಿರಾಜಮಾನಳಾಗುವಳು.
ಫೆ.೨೮ ರವರೆಗೆ ಜಾತ್ರೆ ನಡೆಯಲಿದ್ದು, ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಫೆ.೨೨ ರಿಂದ ೨೪ ರವರೆಗೆ ಪ್ರತಿದಿನ ಮಧ್ಯಾಹ್ನ ೧೨ ರಿಂದ ಸಂಜೆ ೪ ರವರೆಗೆ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ. ಎಲ್ಲರೂ ಜಾತ್ರೆಗೆ ಆಗಮಿಸಿ ದೇವಿಯ ಆಶೀರ್ವಾದ ಪಡೆಯಬೇಕೆಂದು ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ ಕೋರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ