Latest

ಗಾಯತ್ರಿ ಭವನ ಸ್ಥಳಕ್ಕೆ ಶೃಂಗೇರಿ ಶ್ರೀ ಭೇಟಿ

 

 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಅನಿಗೋಳದ ಬಾಬ್ಲೆಬೀದಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜ ಜಿಲ್ಲಾ ಘಟಕದವರು ನಿರ್ಮಿಸುತ್ತಿರುವ ಗಾಯತ್ರಿ ಭವನದ ಕಟ್ಟಡ ನಿರ್ಮಾಣ ನಡೆಯುತ್ತಿರುವ ಸ್ಥಳಕ್ಕೆ ಶೃಂಗೇರಿ ಪೀಠದ ಶ್ರೀ ವಿಧುಶೇಖರಭಾರತಿ ಮಹಾಸ್ವಾಮಿಗಳು ಭೇಟಿ ನೀಡಿದರು.
ಸುಮಂಗಲೆಯರು ಪೂರ್ಣಕುಂಭದೊಡನೆ ಶ್ರೀ ವಿಧುಶೇಖರಭಾರತಿ ಮಹಾಸ್ವಾಮಿಗಳಿಗೆ ಸ್ವಾಗತ ಕೋರಿದರು. ಸ್ವಾಮೀಜಿಯವರು ಬರುವ ವಿಷಯ ತಿಳಿಯುತ್ತಿದ್ದಂತೆ ಬಾಬ್ಲೆಬೀದಿಯ ಜನರೆಲ್ಲರೂ ದಾರಿಯುದ್ದಕ್ಕೂ ತಮ್ಮ ತಮ್ಮ ಮನೆ ಮುಂದೆ ನೀರಿನಿಂದ ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ, ತಮ್ಮ ಭಕ್ತಿಯನ್ನು ಮೆರೆದರು. ಹಬ್ಬದ ವಾತಾವರಣ ನಿರ್ಮಾಣವಾಯಿತು.
8 ಗುಂಟೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಗಾಯತ್ರಿ ಭವನ ನೆಲಮಹಡಿಯಲ್ಲಿ ವಾಹನ ನಿಲುಗಡೆಗಾಗಿ ಹಾಗೂ ಮೊದಲ ಮಹಡಿ ಸಭಾಭವನ ಹಾಗೂ ಎರಡನೇ ಮಹಡಿಯನ್ನು ಮಹಿಳಾ ವಸತಿ ಗೃಹವಾಗಿ ನಿರ್ಮಾಣ ಮಾಡುವ ಯೋಜನೆಗಳನ್ನುಹಾಗೂ ಗಾಯತ್ರಿ ಭವನ ಕಟ್ಟಡ ನಿರ್ಮಾಣ ಕುರಿತಂತೆ ಎಲ್ಲ ವಿಷಯಗಳನ್ನು ಬ್ರಾಹ್ಮಣ ಸಂಘದ ಅಧ್ಯಕ್ಷ ಎಸ್. ಎಂ. ಕುಲಕರ್ಣಿ ಹಾಗೂ ಕಾರ‍್ಯದರ್ಶಿ ಆರ್ .ಆಸ್. ಮುತಾಲಿಕ ವಿವರಿಸಿದರು. ಆಲಿಸಿದ ಸ್ವಾಮೀಜಿಯವರು ಎಲ್ಲ ಒಳತಾಗುವುದಾಗಿ ಹೇಳಿ ಮಂತ್ರಾಕ್ಷತೆ ನೀಡಿ ಶುಭ ಕೋರಿದರು.
ಖಜಾಂಚಿಗಳಾದ ಅರವಿಂದ ಹುನಗುಂದ, ಸಂಜೀವ ಬೆಳವಡಿ ಅಲ್ಲದೇ ಜಯತೀರ್ಥ ಸವದತ್ತಿ, ಕಾನಿಟಕರ, ರಾಖೇಶ ದೇಶಪಾಂಡೆ, ನರಸಿಂಹ ಸವದತ್ತಿ, ಶ್ರೀಧರ ಹಲಗತ್ತಿ, ವಿನಯ ಕುಲಕರ್ಣಿ, ಆನಂದ ಗಲಗಲಿ, ರಾಜೇಶ ಕಡಿವಾಳ, ವಿನೋದ ದೇಶಪಾಂಡೆ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button