ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯಿಂದ ಏರ್ ಇಂಡಿಯಾ ವಿಮಾನ ಹುಬ್ಬಳ್ಳಿಗೆ ಸ್ಥಳಾಂತರವಾಗುತ್ತಿರುವ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ. ಜೂನಿ 20ರಿದ ಬೆಳಗಾವಿ -ಬೆಂಗಳೂರು- ಮುಂಬೈ ಸ್ಪೈಸ್ ಜೆಟ್ ವಿಮಾನ ಆರಂಭವಾಗಲಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದ್ದಾರೆ.
ಪ್ರಗತಿವಾಹಿನಿಯೊಂದಿಗೆ ಮಾತನಾಡಿದ ಅವರು ಏರ್ ಇಂಡಿಯಾ ಹುಬ್ಬಳ್ಳಿಯಿಂದ ಹಾರಾಟ ನಡೆಸಬೇಕು. ಏರ್ ಅಲಾಯನ್ಸ್ ಬೆಳಗಾವಿಯಿಂದ ಹಾರಾಟ ನಡೆಸಬೇಕೆಂದು ನನ್ನ ಮತ್ತು ಪ್ರಹ್ಲಾದ ಜೋಶಿ ಮಧ್ಯೆ ಒಪ್ಪಂದವಾಗಿತ್ತು. ಅದರಂತೆ ಏರ್ ಇಂಡಿಯಾ ಹುಬ್ಬಳ್ಳಿಗೆ ಸ್ಥಳಾಂತರವಾಗುತ್ತಿದೆ. ಅದಕ್ಕೆ ಪರ್ಯಾಯವಾಗಿ ಸ್ಪೈಸ್ ಜೆಟ್ ವಿಮಾನ ಸೇವೆ ಆರಂಭಿಸಲಾಗುತ್ತಿದೆ ಎಂದಿದ್ದಾರೆ.
ಇಂದು ಏರ್ ಇಂಡಿಯಾ ಚೇರಮನ್ ಅಶ್ವನ್ ಲೋಹಾನಿ ಮತ್ತು ಏವಿಯೇಶನ್ ಸೆಕ್ರೆಟರಿ ಪ್ರದೀಪ ಸಿಂಗ್ ಖರೋಲಾ ಜೊತೆ ಮಾತುಕತೆ ನಡೆಸಿದ್ದೇನೆ. ಬೆಳಗಾವಿಗೆ ಭವಿಷ್ಯದಲ್ಲಿ ಸಾಕಷ್ಟು ವಿಮಾನ ಸೇವೆ ಬರಲಿದೆ ಎಂದು ಅವರು ಹೇಳಿದರು.
ಪರ್ಯಾಯ ವ್ಯವಸ್ಥೆಯಾಗುವವರೆಗೆ ಏರ್ ಇಂಡಿಯಾ ಶಿಫ್ಟ್ ಇಲ್ಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ