ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ
ಚಿಕ್ಕೋಡಿಯ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪ್ರಸಾದ ರಾಂಪುರೆ, ನಮ್ಮ ದೈನಂದಿನ ಜೀವನವನ್ನು ಅತ್ಯಂತ ಸುಗಮವಾಗಿ ಸಾಗಿಸಲು ತಂತ್ರಜ್ಞಾನ ಅತ್ಯವಶ್ಯಕ.
ವಿದ್ಯಾರ್ಥಿಗಳು ತಮ್ಮ ಆಸಕ್ತಿಗನುಗುಣವಾಗಿ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ವೃತ್ತಿ ಶಿಕ್ಷಣ ಆಯ್ಕೆ ವೇಳೆಯಲ್ಲಿ ಗೊಂದಲಕ್ಕೊಳಗಾಗದೆ, ನುರಿತವರಿಂದ ಸೂಕ್ತ ಸಲಹೆ ಪಡೆದು, ಪಾಲಕರೊಂದಿಗೆ ಚರ್ಚಿಸಿ, ತಮ್ಮ ವ್ಯಕ್ತಿತ್ವಕ್ಕೆ ಹೊಂದುವ ಪರಿಸರದಲ್ಲಿನ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂದರು.
ಪಿಯುಸಿ ನಂತರ ಇಂಜಿನಿಯರಿಂಗ್, ವೈದ್ಯಕೀಯ, ಔಷಧ ವಿಜ್ಞಾನ, ನರ್ಸಿಂಗ್, ಫಿಸಿಯೋಥೆರಪಿ, ಮೂಲ ವಿಜ್ಞಾನ, ಅಗ್ರಿ, ಮಾಸ್ ಮಿಡಿಯಾ, ಹೊಟೆಲ್ ಮ್ಯಾನೆಜಮೆಂಟ್, ಸೊಶಿಯಲ್ ವರ್ಕ, ಅನಿಮೆಷನ್, ಆರ್ಕಿಟೆಕ್ಚರ್ ಸೇರಿದಂತೆ ಹಲವಾರು ವಿಭಾಗಗಳಿದ್ದು, ನಮ್ಮ ವ್ಯಕ್ತಿತ್ವಕ್ಕೆ ಒಗ್ಗುವ ವಿಭಾಗ ಹಾಗೂ ಕಾಲೇಜಿನ ಪರಿಸರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಪ್ರೊ. ಸಂಜಯ ಅಂಕಲಿ ಸ್ವಾಗತಿಸಿದರು. ಪ್ರೊ. ಸಚಿನ್ ಮೆಕ್ಕಳಕಿ ಮಹಾವಿದ್ಯಾಲಯದ ಬೆಳವಣೆಗೆಯನ್ನು ಪಿಪಿಟಿ ಮುಖಾಂತರ ವಿವರಿಸಿದರು. ಪ್ರೊ. ಮಂಜುನಾಥ ಶರಣಪ್ಪನವರ ನಿರೂಪಿಸಿದರು.
ಪ್ರಾಚಾರ್ಯರಾದ ಹರಿನಾಥ ರೆಡ್ಡಿ, ಪ್ರೊ. ಸುಧೀರ ಡೊನವಾಡೆ, ಪ್ರೊ.ವಿವೇಕ ಪಾಟೀಲ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಪ್ರೊ. ರಾಜು ಹೆಬ್ಬಾಳೆ ಸಂಯೋಜಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ