ಪ್ರಗತಿವಾಹಿನಿ ಸುದ್ದಿ, ಮುಂಬೈ:
ಜೆಟ್ ಏರ್‌ವೇಸ್ ನ 1100 ಪೈಲೆಟ್ ಗಳು ಬಾಕಿ ವೇತನ ಪಾವತಿಸದಿರುವುದರಿಂದ ಸೋಮವಾರ ಬೆಳಗ್ಗೆಯಿಂದ ಹಾರಾಟ ನಡೆಸದಿರಲು ನಿರ್ಧರಿಸಿದ್ದಾರೆ.
ಪೈಲೆಟ್ ಗಳು, ಎಂಜಿನಿಯರ್ಸ್, ಹಿರಿಯ ನಿರ್ವಹಣಾಧಿಕಾರಿಗಳು ಜನೆವರಿ ತಿಂಗಳಿಂದ ವೇತನ ಪಡೆದಿಲ್ಲ. ಇವರೊಂದಿಗೆ ಸಹ ಕೆಲಸಗಾರರಿಗೆ ಮಾರ್ಚ್ ತಿಂಗಳ ವೇತನವನ್ನು ನೀಡಿಲ್ಲ.