ಪ್ರಗತಿವಾಹಿನಿ ಸುದ್ದಿ, ಲಂಡನ್
ಪಂಜಾಬ್ ನ್ಯಾಶನಲ್ ಬ್ಯಾಂಕ್ ಸೋರಿದಂತೆ ವಿವಿಧ ಬ್ಯಾಂಕ್ ಗಳಿಗೆ ವಂಚಿಸಿ ಪರಾರಿಯಾಗಿರುವ ಜ್ರ ವ್ಯಾಪಾರಿ ನೀರವ್ ಮೋದಿ ಬಂಧನಕ್ಕೆ ಲಂಡನ್ ಕೋರ್ಟ್ ವಾರೆಂಟ್ ಹೊರಡಿಸಿದೆ.
ಇದರಿಂದಾಗಿ ಇಂದು ರಾತ್ರಿಯ ಹೊತ್ತಿಗೆ ನೀರ್ ಮೋದಿ ಬಂಧಿಸುವ ಸಾಧ್ಯತೆ ಇದೆ.
ಲಂಡನ್ ನಲ್ಲಿ ನೀರವ್ ಮೋದಿ ಪತ್ತೆ ಹಚ್ಚಿದ ಟೆಲಿಗ್ರಾಫ್ ಪತ್ರಿಕೆ
ಭಾರತದಲ್ಲಿ ವಿವಿಧ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿರುವ ಮೋದಿ ಲಂಡನ್ ಗೆ ತೆರಳಿ ಅಲ್ಲಿ ವಜ್ರದ ವ್ಯಾಪಾರ ಮಂದುವರಿಸಿದ್ದಾರೆ. ಭಾರತದ ಮನವಿಯ ಮೇರೆಗೆ ಲಂಡನ್ ಕೋರ್ಟ್ ವಿಚಾರಣೆ ನಡೆಸಿ ಮೋದಿ ಬಂಧನಕ್ಕೆ ಆದೇಶಿಸಿದೆ ಈ ಸಂಬಂಧ ವಿಚಾರಣೆಯನ್ನು ಮಾ.25ಕ್ಕೆ ಮುಂದೂಡಲಾಗಿದೆ.
ಈ ಬೆಳವಣಿಗೆ ಭಾರತಕ್ಕೆ ವಿಜಯ ಮಲ್ಯ ಬಂಧನದ ನಂತರ ಮತ್ತೊಂದು ಜಯವಾಗಿದೆ. ನೀರವ್ ಮೋದಿ ಪರಾರಿ ಪ್ರಕರಣವನ್ನು ಕಾಂಗ್ರೆಸ್ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಪ್ರಬಲ ಅಸ್ತ್ರವಾಗಿ ಮಾಡಿಕೊಂಡಿತ್ತು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೋದಲ್ಲಿ ಬಂದಲ್ಲಿ ಪ್ರಧಾನಿ ಮೋದಿ ವಿರುದ್ಧ ಟೀಕಿಸಲು ಇದನ್ನೇ ಬಳಸಿಕೊಳ್ಳುತ್ತಿದ್ದರು.