ನೆಟ್ ಬಾಲ್ ಪಂದ್ಯಾವಳಿ ; ಯುನಿವರ್ಸಿಟಿ ಬ್ಲ್ಯೂ ಆಯ್ಕೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ :
ಇತ್ತಿಚೆಗೆ ಬೆಂಗಳೂರಿನ ಕೆ.ಎನ್. ಇನಸ್ಟಿಟ್ಯೂಟ್ ಆಫ ಟೆಕ್ನಾಲಾಜಿಯಲ್ಲಿ ಜರುಗಿದ ವಿಟಿಯು ಸಿಂಗಲ್ ಝೋನ್ ನೇಟ್ ಬಾಲ್ ಕ್ರೀಡೆಯಲ್ಲಿ ಚಿಕ್ಕೋಡಿಯ ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಪ್ರಶಾಂತ ಮಗದುಮ್ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ’ಯುನಿವರ್ಸಿಟಿ ಬ್ಲ್ಯೂ’ ಆಗಿ ಆಯ್ಕೆಯಾಗಿದ್ದಾರೆ.
ಪ್ರಶಾಂತ ಮಗದುಮ್ ಫೆ.೨೦ ರಿಂದ ೨೩ರ ವರೆಗೆ ಚೆನ್ನೈನ ತಮಿಳುನಾಡು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಶ್ವವಿದ್ಯಾಲಯದಲ್ಲಿ ಜರುಗಲಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ನೆಟ್ ಬಾಲ್ ಪಂದ್ಯಾವಳಿಯಲ್ಲಿ ವಿಟಿಯು ತಂಡವನ್ನು ಪ್ರತಿನಿಧಿಸಲಿದ್ದಾರೆ. 

Related Articles

Back to top button