Belagavi NewsBelgaum NewsCrimeKannada NewsKarnataka NewsNational

*ಬೆಳಗಾವಿ ಕೈಗಾರಿಕಾ ಪ್ರದೇಶದಲ್ಲಿ 59 ಗುಂಡುಗಳು ಪತ್ತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಕೈಗಾರಿಕಾ ಪ್ರದೇಶವಾದ ಉದ್ಯಮಬಾಗದಲ್ಲಿ  ಪೌರಕಾರ್ಮಿಕರು ನಡೆಸುತ್ತಿದ್ದ ಕಸ ವಿಲೇವಾರಿ ಕಾರ್ಯದ ವೇಳೆ ಕಸದ ರಾಶಿಯಲ್ಲಿ 59 ಜೀವಂತ ಗುಂಡುಗಳು ಪತ್ತೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಶನಿವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ಪಾಲಿಕೆಯ ಪೌರಕಾರ್ಮಿಕರು ಎಂದಿನಂತೆ ಉದ್ಯಮಬಾಗದ ರಸ್ತೆಯ ಬದಿಯಲ್ಲಿ ಸಂಗ್ರಹವಾದ ಕಸವನ್ನು ವಿಂಗಡಿಸುತ್ತಿದ್ದಾಗ, ಈ ಜೀವಂತ ಗುಂಡುಗಳು ಪತ್ತೆಯಾಗಿವೆ.  ಉದ್ಯಮಬಾಗ ಪೊಲೀಸರು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರುಮ

Home add -Advt

ಸದ್ಯ ಘಟನಾ ಸ್ಥಳದಕ್ಕೆ ಭೇಟಿ ನೀಡಿದ ಪಿಎಸ್ಐ ಪ್ರವೀಣ ಬಿರಾದ ನೇತೃತ್ವದಲ್ಲಿ  ಮಹಜರು ನಡೆಸಲಾಗಿದೆ. ವಶಪಡಿಸಿಕೊಳ್ಳಲಾದ ಒಟ್ಟು 59 ಗುಂಡುಗಳಲ್ಲಿ, 41 ಒಂದು ಮಾದರಿ ಮತ್ತು 18 ಮತ್ತೊಂದು ಮಾದರಿಯ ಗುಂಡುಗಳಾಗಿವೆ.

Related Articles

Back to top button