Latest

ಮನೆ ಮುಂದೆ ಮಲಗಿದ್ದವರ ಮೇಲೆ ಹರಿದ ವಾಹನ; 6 ಜನರ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಲಕ್ನೋ: ಮನೆ ಮುಂದೆ ಮಲಗಿದ್ದವರ ಮೇಲೆ ವಾಹನ ಹರಿದ ಪರಿಣಾಮ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಚಿತ್ರಕೂಟ ಸಮೀಪದ ಝೂನ್ಸಿ-ಮಿರ್ಜಾಪುರ ಹೆದ್ದಾರಿಯಲ್ಲಿ ಭಾರತ್ ಕುಪ್ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.

ಭಾರತ್ ಕುಪ್ ಗ್ರಾಮದಲ್ಲಿ ಬಹುತೇಕ ಮನೆಗಳು ರಸ್ತೆಗೆ ಹೊಂದಿಕೊಂಡಂತಿದ್ದು, ಹಲವರು ರಾತ್ರಿ ವೇಳೆ ಮನೆಯ ಹೊರಭಾಗದಲ್ಲಿ ಮಲಗುತ್ತಾರೆ. ನಿನ್ನೆ ರಾತ್ರಿಯೂ ಮನೆಯ ಹೊರಭಾಗದಲ್ಲಿ ಹಲವರು ಮಲಗಿದ್ದು, ಇಂದು ಬೆಳಿಗ್ಗೆ ವೇಗವಾಗಿ ಬಂದ ಟೊಮೆಟೊ ತುಂಬಿದ ವಾಹನ ಚಾಲಕನ ನಿಯಂತ್ರಣ ತಪ್ಪಿ ಮಲಗಿದ್ದ ಜನರ ಮೇಲೆ ಹರಿದಿದೆ.

ದುರಂತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Home add -Advt

ಐಎ ಎಸ್ ಅಧಿಕಾರಿಗೆ ಬೆದರಿಕೆ ಕರೆ; ಆರೋಪಿ ಅರೆಸ್ಟ್

Related Articles

Back to top button