Latest

ಕಾಲುವೆಗೆ ಉರುಳಿದ ಕಾರು; ನಾಲ್ವರ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಘಟಪ್ರಭಾ ಕಾಲುವೆಗೆ ಕಾರು ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಕಿ ಗ್ರಾಮದ ಬಳಿ ನಡೆದಿದೆ.

ಮಹಾದೇವ ಗೌಡ(27), ಎರಿತಾತಾ(26), ವಿಜಯ್ (26), ಸುನೀಲ್ (24) ಮೃತ ದುರ್ದೈವಿಗಳು. ಕಾರಿನಲ್ಲಿದ್ದ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Home add -Advt

ಕಾರಿನಲ್ಲಿದ್ದವರೆಲ್ಲ ಮುಧೋಳದಿಂದ ರಾಮದುರ್ಗದ ಕಡೆಗೆ ತೆರಳುತ್ತಿದ್ದರು. ಆದರೆ ಕಲ್ಲಿಗೆ ಕಾರು ಗುದ್ದಿದ ಪರಿಣಾಮ ಕಾರು ಘಟಪ್ರಭಾ ಕಾಲುಗೆ ಉರುಳಿದೆ. ಸ್ಥಳಕ್ಕೆ ಲೋಕಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

Related Articles

Back to top button