Latest

ಮಂಜುನಾಥ ಸ್ವಾಮಿಯ ಜತೆ ಚೆಲ್ಲಾಟವಾಡಬಾರದು ಎಂದು ಅನುಭವವಾಗಿದೆ -ಕುಮಾರಸ್ವಾಮಿ

ಪ್ರಗತಿವಾಹಿನಿ ಸುದ್ದಿ, ಧರ್ಮಸ್ಥಳ

ಮಂಜುನಾಥ ಸ್ವಾಮಿ ವಿಷಯದಲ್ಲಿ ಚೆಲ್ಲಾಟವಾಡಬಾರದು. ಅಪಚಾರ ಮಾಡಿದರೆ ಯಾವ ಸ್ಥಾನದಲ್ಲಿದ್ದರೂ ಬಿಡುವುದಿಲ್ಲ ಎನ್ನುವುದು ನನಗೂ ಅನುಭವವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 

ಶನಿವಾರ ಧರ್ಮಸ್ಥಳದ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ವಿಷಯದಲ್ಲಿ ಹಿಂದೊಮ್ಮೆ ನಾನು ಅಪಚಾರ ಮಾಡಿದ್ದೇನೆ ಎಂದು ಆತ್ಮನಿವೇದನೆ ಮಾಡಿಕೊಂಡರು. ನಾವು ಜನಪ್ರತಿನಿಧಿಗಳು ಕೆಲವೊಂದು ರಾಜಕೀಯ ವಿಚಾರ ಸಂಬಂಧಿಸಿ ಅಪಚಾರ ನಡೆಸಿದ್ದೇವೆ. ಅಪಚಾರ ನಡೆಸಿದರೆ ಯಾವ ಸ್ಥಾನದಲ್ಲಿದ್ದರೂ ಮಂಜುನಾಥ ಸ್ವಾಮಿ ಬಿಡುವುದಿಲ್ಲ, ಮಂಜುನಾಥ ಸ್ವಾಮಿಯ ಜತೆ ಯಾರೂ ಚೆಲ್ಲಾಟವಾಡಬಾರದು ಎಂದು ನನಗೂ ಅನುಭವವಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button