ಪ್ರಗತಿವಾಹಿನಿ ವರದಿಗೆ ಭಾರೀ ಸ್ಪಂದನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜಿಸುವ ಸರಕಾರದ ನಿರ್ಧಾರದ ವಿರುದ್ಧ ಉಗ್ರ ಪ್ರತಿಭಟನೆಗೆ ‘ಸ್ವಾಭಿಮಾನಿ ಬೆಳಗಾವಿ’ ಜನ ಸಜ್ಜಾಗುತ್ತಿದ್ದಾರೆ.
ಪ್ರಗತಿವಾಹಿನಿ ಪ್ರಕಟಿಸಿರುವ ವರದಿಗೆ ಸ್ಪಂದಿಸಿರುವ ವಿವಿಧ ಸಂಘಟನೆಗಳು ಯಾವುದೇ ಕಾರಣದಿಂದ ವಿಟಿಯು ವಿಭಜನೆಗೆ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ. ಕರ್ನಾಟಕ ಎಂದರೆ ಕೇವಲ ದಕ್ಷಿಣ ಕರ್ನಾಟಕ ಎಂದು ತಿಳಿದಂತಿದೆ. ನಾವು ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೋರಾಡುತ್ತಿದ್ದರೆ ಈಗಿನ ಸರಕಾರ ಇರುವುದನ್ನೂ ಕಸಿದುಕೊಂಡು ಹೋಗುತ್ತಿದೆ. ಇಂತಹುದಕ್ಕೆ ಅವಕಾಶ ಕೊಡಲು ಸಾಧ್ಯವಿಲ್ಲ ಎಂದ ಅನೇಕರು ಪ್ರತಿಕ್ರಿಯಿಸಿದ್ದಾರೆ.
ಈಗಲೂ ಪ್ರತಿಭಟಿಸದಿದ್ದರೆ ಬೆಳಗಾವಿಯನ್ನೇ ಎತ್ತಿಕೊಂಡು ಹೋದಾರು
ಕನ್ನಡ ಸಂಘಟನೆಗಳ ಮುಖಂಡ ಅಶೋಕ ಚಂದರಗಿ ಫೋನ್ ಮಾಡಿ, “ಪ್ರಗತಿವಾಹಿನಿ’ಯಲ್ಲಿ ಪ್ರಕಟವಾಗಿರುವ ಸುದ್ದಿ ಓದಿದೆ. ನಾಳೆಯೇ ನಾವು ಈ ಸಂಬಂಧ ಪ್ರತಿಭಟನೆ ನಡೆಸುತ್ತೇವೆ. ಭಾನುವಾರ ಮಧ್ಯಾಹ್ನ 12 ಗಂಟೆಗೆೆ ವಿಟಿಯು ವಿಭಜನೆ ವಿರೋಧಿಸಿ ಎಲ್ಲ ಕನ್ನಡ ಸಂಘಟನೆಗಳು ಸೇರಿ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತೇವೆ” ಎಂದು ತಿಳಿಸಿದರು.
ಮಾಜಿ ಮಹಾಪೌರ ಸಿದ್ದನಗೌಡ ಪಾಟೀಲ, ರಾಘವೇಂದ್ರ ಜೋಶಿ, ಅಶೋಕ ಚಂದರಗಿ, ಮಹಾದೇವ ತಳವಾರ, ದೀಪಕ ಗುಡಗನಟ್ಟಿ, ಬಾಬು ಸಂಗೋಡಿ, ಮಹಾಂತೇಶ ರಣಗಟ್ಟಿಮಠ, ಸಾಗರ ಬೊರಗಲ್ಲ, ರಾಜು ಕೋಲಾ, ಯಶೋಧಾ ಬಿರಡಿ, ಕಸ್ತೂರಿ ಭಾವಿ ಮೊದಲಾದವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಕನ್ನಡ ಹೋರಾಟಗಾರ, ಬಿಜೆಪಿ ಮಹಾನಗರ ಪ್ರಧಾನ ಕಾರ್ಯದರ್ಶಿ ರಾಜೀವ ಟೋಪಣ್ಣವರ್, ಪ್ರಗತಿವಾಹಿನಿ ಸುದ್ದಿ ನೋಡಿದೆ. ವಿಟಿಯು ವಿಭಜನೆ ವಿರುದ್ಧ ಹೋರಾಟ ಅನಿವಾರ್ಯ. ಈ ಸಂಬಂಧ ಎಲ್ಲ ಸಂಘಟನೆಗಳೊಂದಿಗೆ ಮಾತನಾಡಿ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇನೆ. ಭಾನುವಾರ ಈ ಸಂಬಂಧ ಸಭೆ ಕರೆಯುತ್ತೇನೆ ಎಂದಿದ್ದಾರೆ.
ಕನ್ನಡ ಹೋರಾಟಗಾರ, ಮಹಾನಗರ ಪಾಲಿಕೆ ಸದಸ್ಯ ದೀಪಕ್ ಜಮಖಂಡಿ, ವಿಟಿಯು ವಿಭಜನೆ ವಿರೋಧಿಸಿ ತಕ್ಷಣ ಹೋರಾಟಕ್ಕಿಳಿಯುವುದಾಗಿ ತಿಳಿಸಿದ್ದಾರೆ.
ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಪ್ರಗತಿವಾಹಿನಿ ವರತಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ವಿಟಿಯು ವಿಭಜನೆ ನಿಲ್ಲಿಸಲೇ ಬೇಕು. ಭಾನುವಾರ ಬೆಂಗಳೂರಿನಿಂದ ಬಂದ ತಕ್ಷಣ ಈ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ನಿರಧರಿಸಲಾಗುವುದು ಎಂದಿದ್ದಾರೆ.
ಉದ್ಯಮಿ ವಂದನಾ ಪ್ರಿಯಾ ಪುರಾಣಿಕ, ವಿಟಿಯು ಬೆಳಗಾವಿಯ ಹೆಮ್ಮೆ. ಅದನ್ನು ಯಾವುದೇ ಕಾರಣಕ್ಕೂ ವಿಭಜಿಸಲು ಅವಕಾಶ ಕೊಡಬಾರದು. ಈ ಸಂಬಂಧ ಹೋರಾಟ ಮಾಡಲೇಬೇಕು. ವಿಟಿಯು ಉಳಿಸಿಕೊಳ್ಳಲು ಯಾವುದ ಹೋರಾಟಕ್ಕೂ ಸಿದ್ಧ ಎಂದಿದ್ದಾರೆ.
ಸ್ಥಳೀಯ ವೆಬ್ ಚಾನೆಲ್ ಬಿಗ್ ನ್ಯೂಸ್ ಮುಖ್ಯಸ್ಥ ಸಂತೋಷ ಶ್ರೀರಾಮುಡು, ಪ್ರಗತಿವಾಹಿನಿ ವರದಿ ಉತ್ತಮವಾಗಿ ಬಂದಿದೆ. ನಾವೂ ಈ ಹೋರಾಟಕ್ಕೆ ಕೈಜೋಡಿಸುತ್ತೇವೆ ಎಂದಿದ್ದಾರೆ.
(ನೀವು ಪ್ರತಿಕ್ರಿಯಿಸಿ -ಪ್ರಗತಿವಾಹಿನಿ ವರದಿ ಪ್ರಕಟಿಸುತ್ತಿದ್ದಂತೆ ವಿಟಿಯು ವಿಭಜನೆ ವಿರೋಧಿಸಿ ಹೋರಾಟಕ್ಕೆ ಸ್ವಾಮಿಭಿಮಾನಿ ಬೆಳಗಾವಿ ಜನ ಸಜ್ಜಾಗುತ್ತಿದ್ದಾರೆ. ಈ ಸಂಬಂಧ ನೀವು ಪ್ರತಿಕ್ರಿಯಿಸಿ. ಇಲ್ಲೆ ಕೆಳಗಡೆ ಇರುವ ಕಮೆಂಟ್ ಬಾಕ್ಸ್ ನಲ್ಲಿ ಅಥವಾ 8197712235 ನಂಬರಿಗೆ ವಾಟ್ಸಪ್ ನಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ)
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಹಂಚಿರಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ