Latest

ವಿವಿಧ ಸ್ಪರ್ಧೆಗಳಲ್ಲಿ ಲಿಂಗರಾಜ ವಿದ್ಯಾರ್ಥಿಗಳ ಸಾಧನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ವಿದ್ಯಾರ್ಥಿ ಪಥ, ಡಾ.ಬಿ.ವಿ. ಕಾರಂತ ಅಧ್ಯಯನ ಪೀಠದ ಸಹಯೋಗದೊಂದಿಗೆ ಫೆ.೧೬ ಹಾಗೂ ೧೭ ರಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ರಾಷ್ಟ್ರ ಪುನರ್ ನಿರ್ಮಾಣಕ್ಕಾಗಿ ವಿದ್ಯಾರ್ಥಿ ಸಾಂಸ್ಕೃತಿಕ ಚಳವಳಿ ಸ್ಪರ್ಧೆಯಲ್ಲಿ ನಗರದ ಕೆಎಲ್‌ಇ ಲಿಂಗರಾಜ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಭಾಷಣ ಸ್ಪರ್ಧೆಯಲ್ಲಿ ಸುಪ್ರಿಯಾ ಪಾಟೀಲ ದ್ವೀತಿಯ, ಸಮೂಹ ಸ್ಪರ್ಧೆ ವಿಭಾಗದ ಬೀದಿ ನಾಟಕದಲ್ಲಿ ಸದಾನಂದ ಹಾಗೂ ತಂಡ ದ್ವಿತೀಯ, ದೇಶಭಕ್ತಿ ಸಮೂಹ ಗೀತೆಯಲ್ಲಿ ಪ್ರಸಾದ ಚಿನ್ನಪ್ಪಗೋಳ ಹಾಗೂ ತಂಡ ತೃತೀಯ, ಏಕಾಂಕ ನಾಟಕದಲ್ಲಿ ಸುಶೀಲ ಕುಮಾರ ಶಿಂಪಿ ಹಾಗೂ ತಂಡ ನಾಲ್ಕನೇ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ತಂಡದ ವ್ಯವಸ್ಥಾಪಕ ನಿರ್ವಾಹಕ ಡಾ.ಎಚ್.ಎಂಚನ್ನಪ್ಪಗೋಳ, ಸುನೀತ ಮೂಡಲಗಿ ಮಾರ್ಗದರ್ಶನ ಮಾಡಿದರು. ರಾಜ್ಯದ ೮೭ ಮಹಾವಿದ್ಯಾಲಯಗಳ ೧೫೦೦ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಲಿಂಗರಾಜ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಎಂ. ಪಾಟೀಲ, ಕೆಎಲ್‌ಇ ಸಂಸ್ಥೆಯ ಸದಸ್ಯ ಪ್ರಕಾಶ ಕಡಕೋಳ ಹಾಗೂ ಸಿಬ್ಬಂದಿ ವರ್ಗ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Related Articles

Back to top button