ಪ್ರಗತಿವಾಹಿನಿ ಸುದ್ದಿ, ರಾಮದುರ್ಗ
ಕಳೆದ ೬೦ ವರ್ಷಗಳಿಂದ ರಾಮದುರ್ಗ ತಾಲೂಕಿನ ವಿದ್ಯುತ್ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ, ತಾಲೂಕಿನ ಪ್ರಥಮ ಇಲೆಕ್ಟ್ರಿಕಲ್ ಸೂಪರ್‌ವೈಸರ್ ಆಗಿದ್ದ ವೀರಭದ್ರಪ್ಪ ಚಂದರಗಿ ನಿಧನರಾದರು. ಅವರಿಗೆ ೮೮ ವರ್ಷ ವಯಸ್ಸಾಗಿತ್ತು.
ಅರವತ್ತರ ದಶಕದ ಆರಂಭದಲ್ಲಿ ರಾಮದುರ್ಗ ನಗರಕ್ಕೆ ವಿದ್ಯುತ್ ಪೂರೈಕೆ ಆರಂಭವಾದ ದಿನಗಳಲ್ಲಿ ಇಲೆಕ್ಟ್ರಿಕಲ್ ಸೂಪರ್‌ವೈಸರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೆಲಸ ಆರಂಭಿಸಿದ ದಿವಂಗತರು ರಾಮದುರ್ಗ ಹಾಗೂ ನೆರೆಹೊರೆಯ ತಾಲೂಕುಗಳಲ್ಲಿ ನೂರಾರು ಶಿಷ್ಯರನ್ನು ಈ ಕ್ಷೇತ್ರದಲ್ಲಿ ಪರಿಣಿತರನ್ನಾಗಿ ಮಾಡಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ