Latest

ಸರಕಾರಕ್ಕೆ ಸವಾಲು ಹಾಕಿದ ಶಾಸಕಿ

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಇದೀಗ ಕಲಬುರ್ಗಿಗೂ ಕಾಲಿಟ್ಟಿದ್ದು, ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಪ್ರತಿಭಟನೆ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕಿ ಖನೀಜ್ ಪಾತೀಮಾ, ಚುನಾವಣೆ ಸಂದರ್ಭದಲ್ಲಿ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ನಾಯಕರು ಇಂತಹ ವಿವಾದ ಸೃಷ್ಟಿಸುತ್ತಿದ್ದಾರೆ. ಇಷ್ಟು ವರ್ಷ ಇಲ್ಲದ ವಿಚಾರ ಈಗ ಇದ್ದಕ್ಕಿದ್ದಂತೆ ವಿವಾದವಾಗಲು ಕಾರಣವೇನು? ಅಭಿವೃದ್ಧಿ ಕೆಲಸಗಳು ರಾಜ್ಯದಲ್ಲಿ ನಡೆಯುತ್ತಿಲ್ಲ. ಅದಕ್ಕೆ ಇಂತಹ ವಿಚಾರಗಳನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂದು ಕಿಡಿಕಾರಿದರು.

Home add -Advt

ಹಿಜಾಬ್ ನಮ್ಮ ಹಕ್ಕು. ಇದನ್ನು ಯಾರೂ ವಿರೋಧಿಸುವಂತಿಲ್ಲ. ನಾನು ವಿಧಾನಸೌಧದಲ್ಲಿ ಹಿಜಾಬ್ ಧರಿಸಿಯೇ ಕೂರುತ್ತೇನೆ. ಧೈರ್ಯವಿದ್ದರೆ ಯಾರಾದರೂ ನನ್ನನ್ನು ತಡೆಯಲಿ. ನಾನು ಸಾಧ್ಯವಾದರೆ ಉಡುಪಿಗೆ ಹೋಗಿ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದಾರೆ.

ಯಾವುದೇ ವಿವಾದ ಸೃಷ್ಟಿಸಿದರೂ ಸರ್ಕಾರ ಸಕ್ಸಸ್ ಆಗಲ್ಲ ಎಂದ ಸಿ.ಎಂ.ಇಬ್ರಾಹಿಂ

Related Articles

Back to top button