Kannada NewsKarnataka NewsLatestPolitics

*ಭಾರತ-ಪಾಕ್ ಕ್ರಿಕೆಟ್ ಪಂದ್ಯ ರದ್ದು ಮಾಡಬೇಕಿತ್ತು ಎಂದ ಸಂಸದ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿಂದು ಭಾರತ-ಪಾಕಿಸ್ತಾನ ನಡುವೆ ಹಣಾಹಣಿ ನಡೆಯಲಿದೆ. ಭಾರಿ ವಿರೋಧದ ನಡುವೆಯೂ ಭಾರತ-ಪಾಕ್ ನಡುವೆ ಪಂದ್ಯ ಆಯೋಜನೆಗೊಂಡಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.

ಭಾರತ-ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ರದ್ದು ಮಾಡಬೇಕಿತ್ತು ಎಂದು ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

Home add -Advt

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬೊಮ್ಮಾಯಿ, ಭಾರತ-ಪಾಕ್ ಪಂದ್ಯ ರದ್ದು ಮಾಡಬೇಕಿತ್ತು. ಪಹಲ್ಗಾಮ್ ನಲ್ಲಿ ನಡೆದ ಹತ್ಯಾಕಾಂಡ ಇನ್ನೂ ಮಾಸಿಲ್ಲ. ಕ್ರೀಡೆ ಮುಖ್ಯ ನಿಜ. ಆದರೆ ಜನರ ಭಾವನೆ ಅದಕ್ಕಿಂತಲೂ ಮುಖ್ಯವಾದದ್ದು. ದೇಶದ ಜನರ ಭಾವನೆಗೆ ಧಕ್ಕೆತರುವಂತೆ ಮಾಡಬಾರದು ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.


Related Articles

Back to top button