ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ, ಬೆಳಗಾವಿ ಶಾಖೆ ಹಾಗೂ ಜೆಎಸ್ಎಸ್ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು.
ಉದ್ಘಾಟನೆ ನೆರವೇರಿಸಿದ ಎಫ್.ಪಿ.ಎ.ಐ. ಬೆಳಗಾವಿ ಶಾಖೆಯ ಮಾಜಿ ಅಧ್ಯಕ್ಷ ಪ್ರೋ. ಜಿ. ಕೆ. ಖಡಬಡಿ, ದೃಢ ನಿರ್ಧಾರ, ನಾಯಕತ್ವದ ಗುಣಗಳು ಸಮಾಜ ಮೌಲ್ಯಗಳನ್ನು ಎತ್ತಿಹಿಡಿಯುತ್ತವೆ. ಸಮಾಜದಲ್ಲಿ ಇರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ಯುವಕರು ಮುಂದಾಗಬೇಕೆಂದರು.
ಉಪನ್ಯಾಸಕರಾಗಿ ಆಗಮಿಸಿದ ಎಫ್.ಪಿ.ಎ.ಐ. ಬೆಳಗಾವಿ ಶಾಖೆಯ ಸದಸ್ಯ ಹಾಗೂ ಬಿ.ಕೆ. ಕಾಲೇಜಿನ ಉಪನ್ಯಾಸಕ ಪ್ರೋ. ಡಿ. ಎನ್. ಮಿಸಾಳೆ, ಯುವಶಕ್ತಿಯಿಂದ ದೇಶಕ್ಕೆ ಗೌರವ ಸಿಗುತ್ತದೆ. ಯಶಸ್ಸನ್ನು ಪಡೆಯಲು ದೃಢ ಪ್ರಯತ್ನ ಮತ್ತು ಇಚ್ಛಾಶಕ್ತಿ ಇರಬೇಕು.ಎಂದರು.
ಜೆ.ಎಸ್.ಎಸ್. ಕಾಲೇಜಿನ ಪ್ರಾಚಾರ್ಯಡಾ.ಎನ್. ಡಿ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ವೈಷ್ಣವಿ ಕಾಕತಿಕರ ಪ್ರಾರ್ಥನೆ ಹಾಡಿದರು. ಕೃಷ್ಣ ಗುಮಾಸ್ತೆ ಸ್ವಾಗತಿಸಿದರು. ವರ್ತಿಕಾ ಹಜಾರೆ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ