Film & Entertainment

*ನಟ ದರ್ಶನ್, ಪವಿತ್ರಾಗೌಡಗೆ ಬಿಗ್ ಶಾಕ್; ಮತ್ತೆ ಜೈಲುವಾಸವೇ ಗತಿ*

ಮೂವರು ಆರೋಪಿಗಳಿಗೆ ರಿಲೀಫ್

ಪ್ರಗತಿವಾಹಿನಿ ಸುದ್ದಿ: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.

Home add -Advt

ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್, ನಟ ದರ್ಶನ್ ಅರ್ಜಿಯನ್ನು ಸೆ.27ಕ್ಕೆ ಮುಂದೂಡಿದೆ. ಇದೇ ವೇಳೆ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.25ಕ್ಕೆ ಮುಂದೂಡಲಾಗಿದೆ.

ಇದೇ ವೇಳೆ ಪ್ರಕರಣದ ಎ15ನೇ ಆರೋಪಿ ಕಾರ್ತಿಕ್, ಎ 17ನೇ ಆರೋಪಿ ನಿಖಿಲ್ ನಾಯ್ಕ್ ಗೆ ಜಾಮೀನು ಮಂಜೂರು ಮಾಡಿದೆ.

ಇನ್ನೊಂದೆಡೆ ಹೈಕೋರ್ಟ್, ರೇಣುಕಾಸ್ವಾಮಿ ಹಯೆ ಪ್ರಕರಣದ ಎ16ನೇ ಆರೋಪಿ ಕೇಶವಮೂರ್ತಿಗೆ ಜಾಮೀನು ಮಂಝೂರು ಮಾಡಿ ಆದೇಶ ಹೊರಡಿಸಿದೆ.

Related Articles

Back to top button