Latest

ಅಭಿಮಾನಿಗಳ ಆಸೆ ಸೋಲಬಾರದು ಎಂದ ಸುಮಲತಾ…

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ತಮ್ಮ ರಾಜಕೀಯ ಪ್ರವೇಶವನ್ನು ಖಚಿತಪಡಿಸುವತ್ತ ಸಾಗುತ್ತಿರುವ ಸುಮಲತಾ ಅಂಬರೀಶ್, ತಮ್ಮ ಅಭಿಮಾನಿಗಳ ಆಸೆ ಸೋಲಬಾರದು ಎಂದಿದ್ದಾರೆ.

ಮೂರೂ ಪಕ್ಷಗಳಲ್ಲೀಗ ಸುಮಲತಾ ಸಂಕಷ್ಟ!

ಆದಿಚುಂಚನಗಿರಿಗೆ ಭೇಟಿ ನೀಡಿದ್ದ ಅವರು, ತಾವು ಸ್ಪರ್ಧಿಸುವುದಾದರೆ ಮಂಡದಿಂದಲೇ. ಆದರೆ ಈ ಬಗ್ಗೆ ಇನ್ನೂ ಅಂತಿಮ ನಿರಧಾರ ತೆಗೆದುಕೊಳ್ಳಬೇಕಿದೆ. ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಬಗ್ಗೆಯೂ ನಿರ್ಧರಿಸಿಲ್ಲ ಎಂದರು.

ಆದಿಚುಂಚನಗಿರಿಗೆ 2 ತಿಂಗಳ ಹಿಂದೆಯೇ ಭೇಟಿ ಕೊಡಬೇಕಿತ್ತು. ಅಭಿಷೇಕ್ ನಟಿಸಿದ ಚಿತ್ರದ ಫಸ್ಟ್ ಟೀಸರ್ ಇದೇ 14ರಂದು ರಿಲೀಸ್ ಆಗುತ್ತಿದೆ.‌‌ ಹೀಗಾಗಿ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇವೆ. ಈ ಭೇಟಿಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.

Related Articles

Back to top button