Latest

ಖಾಸಗಿ ನಿರ್ಣಯಕ್ಕೆ ಸಿಗದ ಸಮಯ: ಶುಕ್ರವಾರ ಅಭಯ್, ಬೆನಕೆ ಧರಣಿ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಖಾಸಗಿ ನಿರ್ಣಯ ಮಂಡಿಸಲು ಗುರುವಾರ ಅವಕಾಶ ಸಿಗದ ಹಿನ್ನೆಲೆಯಲ್ಲಿ ಬೆಳಗಾವಿ ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಶುಕ್ರವಾರ ಧರಣಿ ನಡೆಸಲು ನಿರ್ಧರಿಸಿದ್ದಾರೆ.

ಸುವರ್ಣವಿಧಾನಸೌಧದ ಪಶ್ಚಿಮ ಗೇಟ್ ನಲ್ಲಿ ಶಾಸಕರಿಬ್ಬರೂ ಧರಣಿ ಕುಳಿತುಕೊಳ್ಳುವರು. ಬೆಳಗಾವಿಯಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ ನಿರ್ಮಾಣ ಮಾಡಬೇಕು ಮತ್ತು ಐತಿಹಾಸಿಕ ವ್ಯಕ್ತಿಗಳ ಸ್ಮಾರಕವೊಂದನ್ನು ನಿರ್ಮಣ ಮಾಡಬೇಕೆನ್ನುವ ವಿಷಯದ ಮೇಲೆ ಖಾಸಗಿ ನಿರ್ಣಯ ಮಂಡಿಸಲು ಅಭಯ ಪಾಟೀಲ ನಿರ್ಧರಿಸಿದ್ದರು. ಅಜೆಂಡಾದಲ್ಲೂ ವಿಷಯ ಸೇರ್ಪಡೆಯಾಗಿತ್ತು.

ಆದರೆ 6 ಗಂಟೆಗೆ ಸಮಯವಾಯಿತೆಂದು ಸಧನವನ್ನು ಶುಕ್ರವಾರಕ್ಕೆ ಮುಂದಕ್ಕೆ ಹಾಕಲಾಯಿತು. ಇದರಿಂದಾಗಿ ನಿರ್ಣಯ ಮಂಡಿಸಲು ಅವಕಾಶ ಸಿಗಲೇ ಇಲ್ಲ. ಮತ್ತೆ ಯಾವಾಗ ಅವಕಾಶ ನೀಡಲಾಗುವುದೆನ್ನುವುದನ್ನೂ ಪ್ರಕಟಿಸಿಲ್ಲ. ಇದರಿಂದ ರೊಚ್ಚಿಗೆದ್ದ ಶಾಸಕರು ಶುಕ್ರವಾರ ಧರಣಿಗೆ ನಿರ್ಧರಿಸಿದರು.

ಸರಕಾರಕ್ಕೆ ಈ ವಿಷಯ ಚರ್ಚೆಗೆ ಆಸಕ್ತಿ ಇಲ್ಲ. ಹಾಗಾಗಿ ಸಮಯವಿದ್ದರೂ ಸದನ ಮುಂದೂಡಲಾಯಿತು. ಇನ್ನು ಮುಂದಿನ ಗುರುವಾರ ಸಮಯ ನಿಗದಿಪಡಿಸಿ, ಅಂದೂ ಸದನ ಮುಂದೂಡಲಾಗುತ್ತದೆ ಎಂದು ಅಭಯ ಪಾಟೀಲ ಪ್ರಗತಿವಾಹಿನಿಗೆ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button