Latest

ನಿಖಿಲ್ ಸೋಲಿಸಲು ಕಾಂಗ್ರೆಸ್ ಸೇರಿ ಚಕ್ರವ್ಯೂಹ ರಚನೆ -ಕುಮಾರಸ್ವಾಮಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ನನ್ನ ಮಗ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಲು ಕಾಂಗ್ರೆಸ್, ಬಿಜೆಪಿ ಹಾಗೂ ರೈತ ಸಂಘ ಸೇರಿ ಚಕ್ರವ್ಯೂಹ ರಚಿಸಿವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

Home add -Advt

ಇದನ್ನು ಹೇಳಲು ನನಗೆ ಯಾವುದೇ ಅಂಜಿಕೆ ಇಲ್ಲ. ನೇರವಾಗಿಯೇ ಮಾತನಾಡುತ್ತೇನೆ. 3 ತಿಂಗಳಿಂದ ಈ ಬೆಳವಣಿಗೆ ನಡೆಯುತ್ತಿದೆ. ಇವರಿಗೆಲ್ಲ ಒಟ್ಟಾರೆ ಮಂಡ್ಯದಲ್ಲಿ ಜೆಡಿಎಸ್ ನ್ನು ಸೋಲಿಸಬೇಕಿದೆ. ಬರೆ ಕ್ಷೇತ್ರಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಮಂಡ್ಯದ ವಿದ್ಯಮಾನವನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ ಎಂದರು.

ಈ ಕುರಿತು ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ನಾನು ದಿಟ್ಟ ಉತ್ತರ ನೀಡುತ್ತೇನೆ. ಎಷ್ಟೇ ಚಕ್ರವ್ಯೂಹ ರಚನೆ ಮಾಡಿದರೂ ಹಳ್ಳಿಗಳಲ್ಲಿನ ನಿಜವಾದ ವಾತಾವರಣವೇ ಬೇರೆ ಇದೆ ಎಂದರು ಅವರು. 

ಬಿಜೆಪಿ ಜೊತೆಗೆ ಕಾಂಗ್ರೆಸ್ ಹೆಸರನ್ನೂ ಸೇರಿಸಿ ಕುಮಾರಸ್ವಾಮಿ ಆರೋಪ ಮಾಡಿರುವುದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

Related Articles

Back to top button