Film & EntertainmentKannada NewsLatest

*ನಿರ್ಮಾಪಕ ಬಂಡ್ಲ ಗಣೇಶ್​​ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್*

ಖ್ಯಾತ ಸಿನಿಮಾ ನಿರ್ಮಾಪಕ, ಹಾಸ್ಯ ನಟ ಮತ್ತು ಪವನ್ ಕಲ್ಯಾಣ್ ಅವರ ಆಪ್ತರೂ ಎನಿಸಿಕೊಂಡಿರುವ ಬಂಡ್ಲ ಗಣೇಶ್​​ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ತೆಲುಗು ಸಿನಿಮಾ ನಿರ್ಮಾಪಕರಾಗಿರುವ ಬಂಡ್ಲ ಗಣೇಶ್ ವಿರುದ್ಧ ಒಂಗೋಲ್ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಬಂಡ್ಲ ಗಣೇಶ್​​ಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 95 ಲಕ್ಷ ರೂಪಾಯಿ ಜುಲ್ಮಾನೆಯನ್ನು ವಿಧಿಸಿದೆ.

ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಮದ್ದಿರಾಲಪಾಡು ನಿವಾಸಿ ಜೆಟ್ಟಿ ವೆಂಕಟೇಶ್ವರ ರಾವ್ ಅವರು ನಿರ್ಮಾಪಕ ಬಂಡ್ಲ ಗಣೇಶ್ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.

ಮೂಲಗಳ ಪ್ರಕಾರ ಗಣೇಶ್ ಅವರು 2018ರಲ್ಲಿ ವೆಂಕಟೇಶ್ವರ ರಾವ್ ಅವರ ಮಗ ಜಾನಕಿ ರಾಮಯ್ಯ ಅವರಿಂದ ₹95 ಲಕ್ಷ ಸಾಲ ಪಡೆದಿದ್ದರು. ರಾಮಯ್ಯ ಅವರ ನಿಧನದ ನಂತರ, ಬಾಕಿ ಮರುಪಾವತಿಗಾಗಿ ತಮ್ಮ ನಿರ್ಮಾಣ ಸಂಸ್ಥೆ ಪರಮೇಶ್ವರ ಆರ್ಟ್ಸ್ ಹೆಸರಿನಲ್ಲಿ ಚೆಕ್ ನೀಡಿದರು. ಖಾತೆಯಲ್ಲಿ ಹಣ ಇಲ್ಲದ ಕಾರಣ ಆ ಚೆಕ್ ಬೌನ್ಸ್ ಆಯಿತು. ಸಾಲ ಮರುಪಾವತಿ ಮಾಡುವಂತೆ ಗಣೇಶ್ ಅವರನ್ನು ಹಲವು ಬಾರಿ ವಿನಂತಿಸಿದರೂ ಸಹ ಗಣೇಶ್, ಹಣ ನೀಡಿರಲಿಲದಲ ಆಗ ವೆಂಕಟೇಶ್ವರ ರಾವ್ ಅವರು ಓಂಗೋಲ್ ನ್ಯಾಯಾಲಯದ ಮೊರೆ ಹೋದರು.

ಪ್ರಕರಣ 2019ರಲ್ಲಿ ದಾಖಲಾಗಿ ಸುಮಾರು ಏಳು ವರ್ಷ ವಿಚಾರಣೆಯಲ್ಲಿತ್ತು. ನವೆಂಬರ್ 18, ಬುಧವಾರ ನ್ಯಾಯಾಲಯ ಅಂತಿಮ ತೀರ್ಪು ನೀಡಿ, ಒಂದು ವರ್ಷ ಜೈಲು ಶಿಕ್ಷೆ ಮತ್ತು ₹95 ಲಕ್ಷ ದಂಡ ವಿಧಿಸಿದೆ. ದೂರುದಾರರು ಮಾಡಿದ ಕಾನೂನು ವೆಚ್ಚವನ್ನೂ ಭರಿಸುವಂತೆ ಕೋರ್ಟ್ ಸೂಚಿಸಿದೆ. ಮೇಲ್ಮನವಿ ಸಲ್ಲಿಸಲು ನ್ಯಾಯಾಲಯ ಒಂದು ತಿಂಗಳ ಕಾಲಾವಕಾಶ ನೀಡಿದೆ.

ಈ ಹಿಂದೆಯೂ ಸಹ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2024 ರ ಫೆಬ್ರವರಿ ತಿಂಗಳಲ್ಲಿ ಕೆಳ ಹಂತದ ನ್ಯಾಯಾಲಯವು ಬಂಡ್ಲ ಗಣೇಶ್​​ಗೆ ಒಂದು ವರ್ಷ ಜೈಲು ಶಿಕ್ಷೆ ನೀಡಿ ತೀರ್ಪು ನೀಡಿತ್ತು. ಬಳಿಕ ಬಂಡ್ಲ ಗಣೇಶ್ ಮೇಲ್ಮನವಿ ಸಲ್ಲಿಸಿದ್ದರು. ಈಗ ಒಂಗೊಲ್ ನ್ಯಾಯಾಲಯದಲ್ಲಿ ಮತ್ತೊಮ್ಮೆ ಗಣೇಶ್​​ಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ. ಹಾಗೂ ನಾಲ್ಕು ವಾರಗಳ ಒಳಗಾಗಿ ಪೊಲೀಸರಿಗೆ ಶರಣಾಗುವಂತೆ ಕಾಲಮಿತಿ ನೀಡಿದೆ.

Related Articles

Back to top button