
ಪ್ರಗತಿವಾಹಿನಿ ಸುದ್ದಿ: ಇಬ್ಬರು ಮಕ್ಕಳೊಂದಿಗೆ ಊರಿಗೆ ತೆರಳುತ್ತಿದ್ದಾಗ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ, ಇಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಅಮರ್ ಚೌಸ್ (32), ಇವರ ಪುತ್ರ ಅಮನ್ (9) ಹಾಗೂ ಮಗಳು ಅಮಯ್ ಯಾರಾ (6) ಮೃತ ದುರ್ದೈವಿಗಳು. ಕುಟುಂಬ ಕಲಹದಿಂದ ಗಂಡ-ಹೆಂಡತಿ ನಡುವೆ ಜಗಳವಾಗಿತ್ತು. ಕೋಪದ ಬರದಲ್ಲಿ ಇಬ್ಬರು ಮಕ್ಕಳನ್ನು ಪತಿ ತನ್ನೊಂದಿಗೆ ಕರೆದುಕೊಂಡು ಊರುಗೆ ತೆರಳುತ್ತಿದ್ದಾಗ ಮೂವರು ದುರಂತಕ್ಕೀಡಾಗಿದ್ದಾರೆ.
ಕೊಪ್ಪಳ ತಾಲೂಕಿನ ಗಿಣಿಗೇರಾ ಗ್ರಾಮದ ಬಳಿ ಈ ದುರಂತ ನಡೆದಿದೆ. ಗಂಗಾವತಿ ನಿವಾಸಿಯಾದ ಅಮರ್ ಚೌಸ್ ಕುಟುಂಬ ಕಲಹ ಕಾರಣ ಪತ್ನಿ ತವರು ಮನೆಯಾದ ಕೊಪ್ಪಳಕ್ಕೆ ಬಂದಿದ್ದರು. ಪತ್ನಿಯನ್ನು ಕರೆದೊಯ್ಯಲು ಗಂಗಾವತಿಯಿಂದ ಕೊಪ್ಪಳಕ್ಕೆ ಬಂದಿದ್ದ ಅಮರ್ ಚೌಸ್ ಪುನಃ ಪತ್ನಿಯೊಂದಿಗೆ ಜಗಳ ವಾಡಿಕೊಂಡಿದ್ದರು.
ಕೋಪದಲ್ಲಿ ತಡರಾತ್ರಿ ವಾಪಸ್ ಗಂಗಾವತಿಗೆ ಬೈಕ್‌ನಲ್ಲಿ ತೆರಳಿದ್ದಾರೆ. ಜೊತೆಗೆ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ಗಿಣಿಗೇರಿ ಬಳಿ ಲಾರಿಯೊಂದು ವೇಗವಾಗಿ ಬಂದು ಬೈಕಿಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.
ಅಪಘಾತದ ತೀವ್ರತೆಗೆ ಬೈಕ್ ಸ್ಂಪೂರ್ಣ ನುಜ್ಜುಗುಜ್ಜಾಗಿದೆ. ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




