ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಶುಕ್ರವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರುಹಾಜರಾದ ಬೆಳಗಾವಿಯ ಇಬ್ಬರು ಶಾಸಕರಿಗೆ ಕಾಂಗ್ರೆಸ್ ನೋಟೀಸ್ ನೀಡಿದೆ.
ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮತ್ತು ಅಥಣಿ ಶಾಸಕ ಮಹೇಶ ಕುಮಟಳ್ಳಿಗೆ ನೋಟೀಸ್ ನೀಡಲಾಗಿದೆ. ಅತ್ಯಂತ ಮಹತ್ವದ ಶಾಸಕಾಂಗ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ತಿಳಿಸಿದ್ದರೂ ನೀವು ಹಾಜರಾಗಲಿಲ್ಲ. ಅಲ್ಲದೆ ತಾವು ಬಿಜೆಪಿ ನಾಯಕರನ್ನು ಹಲವು ಬಾರಿ ಭೇಟಿಯಾಗಿದ್ದಾಗಿ ಮಾಧ್ಯಮಗಳಲ್ಲಿ ನಿರಂತರವಾಗಿ ಬರುತ್ತಿದ್ದರೂ ಇದನ್ನು ನಿರಾಕರಿಸಲಿಲ್ಲ. ಹಾಗಾಗಿ ಈ ನೋಟೀಸ್ ತಲುಪಿದ ತಕ್ಷಣ ಉತ್ತರ ನೀಡಿ. ಇಲ್ಲವಾದಲ್ಲಿ ನಿಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗಳಿಸಲು ಕ್ರಮ ತೆಗೆಕೊಳ್ಳಲಾಗುವುದು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೋಟೀಸ್ ನಲ್ಲಿ ತಿಳಿಸಿದ್ದಾರೆ.
ಗೈರಾದ ಇನ್ನಿಬ್ಬರು ಶಾಸಕಾರದ ನಾಗೇಂದ್ರ ಮತ್ತು ಉಮೇಶ ಜಾಧವ ಪೂರ್ವಾನುಮತಿ ಪಡೆದಿದ್ದರು. ಹಾಗಾಗಿ ಅವರಿಗೆ ನೋಟೀಸ್ ನೀಡಲಾಗಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಇಬ್ಬರಿಗೂ ಅವರ ಕ್ಷೇತ್ರದಲ್ಲಿರುವ ಮನೆಯ ವಿಳಾಸಕ್ಕೆ ನೋಟೀಸ್ ಕಳಿಸಲಾಗಿದ್ದು, ನೊಟೀಸ್ ಗೆ ಜಾರಕಿಹೊಳಿ ಮತ್ತು ಕುಮಟಳ್ಳಿ ಏನು ಉತ್ತರ ನೀಡಲಿದ್ದಾರೆ ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ