Latest

 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಅನಾವರಣ

ಪ್ರಗತಿವಾಹಿನಿ ಸುದ್ದಿ, ಚಿಕ್ಕಬಳ್ಳಾಪುರ: 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

ಇದು ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿರುವ ಪ್ರತಿಮೆಯ ಪ್ರತಿರೂಪವಾಗಿದೆ.

ಪ್ರತಿಮೆಯ ಭಾಗವಾಗಿರುವ ಯೋಗ ಕೇಂದ್ರವನ್ನು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕೈಗೊಳ್ಳಲಾಗಿದೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ನಂತರ ಕರ್ನಾಟಕ ಹೈಕೋರ್ಟ್ ಶುಕ್ರವಾರ ಅದರ ಉದ್ಘಾಟನೆಗೆ ಅನುಮತಿ ನೀಡಿದ ನಂತರ ಇದು ಲೋಕಾರ್ಪಣೆಗೊಂಡಿದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಆದಿಯೋಗಿ ಬಹು ಕಾಲ ಜನರನ್ನು ಪ್ರೇರೇಪಿಸಲಿದ್ದು, ಇದೀಗ ಕರ್ನಾಟಕದಲ್ಲಿ ಪ್ರತಿಮೆ ಸ್ಥಾಪನೆಯಾಗಿರುವುದು ಸಂತಸ ತಂದಿದೆ ಎಂದರು.

“ನಾನು ಕೊಯಮತ್ತೂರಿನ ಆದಿ ಯೋಗಿ ಪ್ರತಿಮೆಯನ್ನು ನೋಡಿದ್ದೇನೆ ಮತ್ತು ಜನರು ಆಧ್ಯಾತ್ಮಿಕ ಆನಂದ ಹಾಗೂ ಸಕಾರಾತ್ಮಕತೆ ಅನುಭವಿಸುತ್ತಾರೆ ಎಂದರು.

ಈ ಪ್ರತಿಮೆಯನ್ನು ರಾಜ್ಯಕ್ಕೆ ತಂದಿದ್ದಕ್ಕಾಗಿ ‘ಸದ್ಗುರು’ ಎಂದೇ ಖ್ಯಾತರಾಗಿರುವ ಇಶಾ ಫೌಂಡೇಶನ್ ಮುಖ್ಯಸ್ಥ ಜಗ್ಗಿ ವಾಸುದೇವ್ ಅವರನ್ನು ಶ್ಲಾಘಿಸಿದರು.

*ಹೋರಿ ಬೆದರಿಸುವ ಸ್ಪರ್ಧೆ: ಹೋರಿ ತಿವಿದು ಇಬ್ಬರು ಯುವಕರ ದುರ್ಮರಣ*

https://pragati.taskdun.com/bull-raceshivamoggatwo-youth-death/

*ನಾ ನಾಯಕಿ ಸಮಾವೇಶಕ್ಕೆ ಸಿಎಂ ಬೊಮ್ಮಾಯಿ ವ್ಯಂಗ್ಯ*

https://pragati.taskdun.com/priyanka-gandhikarnataka-visitcm-basavaraj-bommaireaction/

*ರಾಜ್ಯಕ್ಕೆ ಆಗಮಿಸಿದ ಪ್ರಿಯಾಂಕಾ ಗಾಂಧಿಗೆ ಅದ್ದೂರಿ ಸ್ವಾಗತ*

https://pragati.taskdun.com/priyanka-gandhibngalorevisitcongress-samavesha/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button