Uncategorized

*ಕರಾವಳಿಯಲ್ಲಿ ತೈಲ ಟ್ಯಾಂಕರ್ ಮುಳುಗಿ 13 ಭಾರತೀಯರ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ಒಮನ್ ದೇಶದ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮುಳುಗಿದ್ದು, ಅದರಲಿದ್ದ 16 ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ 13 ಮಂದಿ ಭಾರತೀಯರು ಎಂದು ವರದಿಗಳು ತಿಳಿಸಿವೆ

ಈ ತೈಲ ಟ್ಯಾಂಕ‌ರ್ ಯೆಮೆನ್‌ ಅಡೆನ್ ಬಂದರಿಗೆ ತೆರಳುತ್ತಿತ್ತು, ನಾಪತ್ತೆಯಾದ ಸಿಬ್ಬಂದಿಯಲ್ಲಿ ಮೂವರು ಶ್ರೀಲಂಕಾದವರು ಎಂದು ತಿಳಿದು ಬಂದಿರುವುದಾಗಿ ಕೇಂದ್ರ ಹೇಳಿದೆ. ದ್ವೀಪರಾಷ್ಟ್ರ ಕೊಮೊರಸ್‌ನ ಕೊಮೊರೊಸ್ ಧ್ವಜ ಹೊಂದಿರುವ ಪ್ರೆಸ್ಟೀಜ್‌ ಫಾಲ್ಕನ್ ಹೆಸರಿನ ತೈಲ ಟ್ಯಾಂಕರ್ ರಾಸ್ ಮದ್ರಕಾದಿಂದ 25 ನಾಟಿಕಲ್ ಮೈಲು ದೂರದ ಬಂದರು ಪಟ್ಟಣವಾದ ಡುಮ್ಮಿ ಬಳಿ ಮುಳುಗಿದೆ ಎಂದು ಒಮಾನ್‌ನ ಸಾಗರ ಭದ್ರತಾ ಕೇಂದ್ರ ಮಾಹಿತಿ ನೀಡಿದೆ. ಸಿಬ್ಬಂದಿಯನ್ನು ಹುಡುಕುವ ಪ್ರಯತ್ನಗಳು ನಡೆಯುತ್ತಿವೆ. ಅವರ ಪತ್ತೆಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 

Home add -Advt

Related Articles

Back to top button