Kannada NewsKarnataka NewsLatest

ಭಾರತವನ್ನು ವಿಶ್ವಗುರು ಮಾಡುವಲ್ಲಿ ಸಹಭಾಗಿಗಳಾದ ವಿದ್ಯಾರ್ಥಿಗಳು

ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾನದ ೧೩ ನೇ ಸಂಸ್ಥಾಪನಾ ದಿನಾಚರಣೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾನದ ೧೩ ನೇ ಸಂಸ್ಥಾಪನಾ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು.

ಸಂಸ್ಥೆಯ ಚೇರಮನ್ ಹಾಗೂ ಕೇಂದ್ರ ರೇಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ೨೦೦೮ ರಲ್ಲಿ ಪ್ರಾರಂಭಿಸಿದ ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದ ಕೌಶಲ್ಯ ಕಲೆಯನ್ನು ಸ್ವದೇಶದಿಂದ ವಿದೇಶದವರೆಗೆ ಕೊಂಡೊಯ್ಯುವಲ್ಲಿ ಯಶಸ್ಸನ್ನು ಗಳಿಸಿದ್ದಾರಲ್ಲದೇ ಭಾರತವನ್ನು ವಿಶ್ವಗುರು ಮಾಡುವಲ್ಲಿ ಸಹಭಾಗಿಗಳಾಗಿದ್ದಾರೆ ಎಂದರು.

ಪ್ರಾರಂಭದಿಂದ ಸೇವೆ ಮಾಡುತ್ತಿರುವ ಪ್ರಾಧ್ಯಾಪಕರುಗಳನ್ನು ನೆನೆಯುತ್ತ, ನಿಮ್ಮ ಮಾರ್ಗದರ್ಶನವು ವಿದ್ಯಾರ್ಥಿಗಳನ್ನು ಕೌಶಲ್ಯ ಕಲೆಗಳಲ್ಲಿ ಪರಿಣಿತಿ ಹೊಂದುವ ಹಾಗೆ ಅವರು ಕೈಗಾರಿಕಾ ಕ್ಷೇತ್ರಗಳಲ್ಲಿ ತಯಾರಿಸುವ ಸಾಮಗ್ರಿಗಳು ಭಾರತದಲ್ಲಿ ಅಲ್ಲದೇ ವಿದೇಶಗಳಲ್ಲಿ ಕೂಡ ಕೀರ್ತಿ ಪತಾಕೆ ಹಾರಿಸುವಂತೆ ಇರಬೇಕು. ತಾಂತ್ರಿಕ ಕ್ಷೇತ್ರದ ವಿದ್ಯಾರ್ಥಿಗಳು ಉದ್ಯಮಿಗಳಾಗಿ ಹೊರಬರಬೇಕೆಂದು ತಿಳಿಸಿದರು.

ಸಂಸ್ಥೆಯ ಉಪಾಧ್ಯಕ್ಷೆ ಮಂಗಲ ಅಂಗಡಿ, ನಿರ್ದೇಶಕಿ ಶ್ರದ್ಧಾ ಶೆಟ್ಟರ ಉಪಸ್ಥಿತರಿದ್ದರು.

ಅಂಗಡಿ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ. ಸಂಗೀತಾ ದೇಸಾಯಿ ಹಾಗೂ ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥೆ ಪ್ರೊ. ಅನುರಾಧಾ ಹೂಗಾರ ಸಂಸ್ಥೆಯ ಬೆಳವಣಿಗೆಯ ಬಗ್ಗೆ ಮಾತನಾಡಿದರು.

ಆಡಳಿತಾಧಿಕಾರಿ ರಾಜು ಜೋಶಿ, ಶ್ರೀಕಾಂತ ಕಡಕೋಳ, ಸಂತೋಷ ತುಬಚಿ, ಅಂಗಡಿ ಇಂಟರನ್ಯಾಷನಲ್ ಸ್ಕೂಲಿನ ಮುಖ್ಯಾಧ್ಯಾಪಕಿ ಪ್ರೊ. ಆಶಾ ರಜಪೂತ, ಅಂಗಡಿ ಸ್ಕೂಲ್ ಆಫ್ ಆರ್ಕಿಟೆಕ್ಚರ ಕಾಲೇಜಿನ ಪ್ರಾಚಾರ್ಯ ಪ್ರೊ. ಎಚ್.ಎಸ್. ಪಾಟೀಲ, ಡಾ. ಸಂಜಯ ಪೂಜಾರಿ, ಎಂ.ಬಿ.ಎ. ವಿಭಾಗದ ಡಾ. ರಾಜೇಂದ್ರ ಇನಾಮದಾರ, ಸೇರಿದಂತೆ ಎಲ್ಲ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಡಾ. ಆನಂದ ದೇಶಪಾಂಡೆ ಸ್ವಾಗತಿಸಿದರು. ಪ್ರೊ. ವರ್ಷಾ ದೇಶಪಾಂಡೆ ನಿರೂಪಿಸಿದರು. ಪ್ರೊ. ಪ್ರಿಯಾಂಕಾ ಅನ್ವೇಕರ ವಂದಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button